ನವದೆಹಲಿ:ಕರ್ನಾಟಕ ಹೈಕೋರ್ಟ್‌ಗೆ ಹೊಸದಾಗಿ ಐವರು ನ್ಯಾಯಮೂರ್ತಿಗಳ ನೇಮಕಕ್ಕೆ ಸುಪ್ರೀಂಕೋರ್ಟ್ ಅನುಮೋದನೆ ನೀಡಿದೆ. ಜುಲೈ 19ರಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದಲ್ಲಿ ಈ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಅನಿಲ್ ಭೀಮಶೇನ್ ಕಟ್ಟಿ, ಗುರುಸಿದ್ಧಯ್ಯ ಬಸವರಾಜ, ಚಂದ್ರಶೇಖರ್ ಮೃತ್ಯಂಜಯ ಜೋಶಿ,ಉಮೇಶ್ ಮಂಜುನಾಥ್ಭಟ್ಟ ಅಡಿಗ ಹಾಗೂ ತಲ್ಕಾಡ ಗಿರಿಗೌಡ ಶಿವಶಂಕ್ರೆ ಗೌಡ ಅವರನ್ನು ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಅನುಮೋದನೆ ನೀಡಲಾಗಿದೆ.