ನವದೆಹಲಿ: ಗರ್ಭಪಾತವು ಮಹಿಳೆಯ ಜೀವಕ್ಕೆ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಅನುಮೋದಿಸಿದರೆ, ಅವಿವಾಹಿತ ಮಹಿಳೆ 24 ವಾರಗಳಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಅದಕ್ಕಾಗಿ ವೈದ್ಯಕೀಯ ಮಂಡಳಿ ರಚಿಸುವಂತೆ ಏಮ್ಸ್ ನಿರ್ದೇಶಕರಿಗೆ ನಿರ್ದೇಶನ ನೀಡಿದೆ.
ವೈದ್ಯಕೀಯ ಮಂಡಳಿ ರಚಿಸುವಂತೆ ತಿಳಿಸಿರುವ ಸುಪ್ರೀಂಕೋರ್ಟ್ ಗರ್ಭಾವಸ್ಥೆ ಸುರಕ್ಷಿತವಾಗಿದ್ದರೆ ಗರ್ಭಪಾತ ಮಾಡಿದ ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಏಮ್ಸ್ ನಿರ್ದೇಶಕರಿಗೆ ನಿರ್ದೇಶನ ನೀಡಿದೆ.
ಜಸ್ಟಿಸ್ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ ಮಹಿಳೆಯೊಬ್ಬರ ಮನವಿ ಮೇರೆಗೆ ಈ ಆದೇಶ ನೀಡಿದೆ. ಈಗಾಗಲೇ ದೆಹಲಿ ಹೈಕೋರ್ಟ್ ಈ ಮನವಿ ತಿರಸ್ಕಾರ ಮಾಡಿದೆ. ಇದನ್ನೇ ಪ್ರಶ್ನೆ ಮಾಡಿದ್ದ ಅವಿವಾಹಿತ ಮಹಿಳೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.