ನವದೆಹಲಿ: ಟೆಕ್ಕಿ ದಂಪತಿಗೆ ಎರಡನೇ ಮದುವೆಯ ಕುರಿತು ಸುಪ್ರೀಂ ಕೋರ್ಟ್ ಕಿವಿ ಮಾತೊಂದನ್ನು ಹೇಳಿದೆ. ನಿಮ್ಮ ಸಂಸಾರದ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಸಮಯ ಕೊಡಲು ಸಾಧ್ಯವಾಗದ ಹಿನ್ನೆಲೆ ಮತ್ತೆ ಒಂದಾಗಲು ಇನ್ನೊಂದು ಅವಕಾಶ ಏಕೆ ಪಡೆಯಬಾರದು ಎಂದು ವಿಚ್ಛೇದನ ಕೋರಿ ಬಂದಿರುವ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ದಂಪತಿಗೆ ಸುಪ್ರೀಂಕೋರ್ಟ್ ಪ್ರಶ್ನೆ ಕೇಳಿದೆ.
ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಬಿವಿ ನಾಗರತ್ನ ಅವರಿದ್ದ ಪೀಠ ವಿಚಾರಣೆ ವೇಳೆ, " ಪತಿ ಮತ್ತು ಪತ್ನಿ ಇಬ್ಬರೂ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದು, ಒಬ್ಬರು ಹಗಲು ಮತ್ತು ಇನ್ನೊಬ್ಬರು ರಾತ್ರಿ ಕೆಲಸಕ್ಕೆ ಹೋಗುತ್ತೀರಾ. ನಿಮಗೆ ವಿಚ್ಛೇದನ ಬಗ್ಗೆ ಪಶ್ಚಾತ್ತಾಪವಿಲ್ಲ, ಆದರೆ ಮದುವೆ ಬಗ್ಗೆ ಪಶ್ಚಾತ್ತಾಪ ಇದೆ. ನಿಮಗೆ ಈ ಸಂಸಾರ ಸರಿಪಡಿಸಲು ಎರಡನೇ ಅವಕಾಶ ಏಕೆ ನೀಡಬಾರದು?, ನೀವು ವಿಚ್ಛೇದನವನ್ನು ತೆಗೆದುಕೊಳ್ಳುವ ಬದಲು ಎರಡನೇ ಮದುವೆಗೆ ಅವಕಾಶ ನೀಡುವ ಬಗ್ಗೆ ಯಾಕೆ ಯೋಚಿಸಬಾರದು ಎಂದು ದಂಪತಿಗೆ ಕೇಳಿದೆ. ಜೊತೆಗೆ, ಬೆಂಗಳೂರಿನಲ್ಲಿ ಹೆಚ್ಚು ವಿಚ್ಛೇದನಗಳು ನಡೆಯುವುದಿಲ್ಲ. ಒಂದಾಗಲು ನೀವಿಬ್ಬರೂ ಮತ್ತೊಂದು ಅವಕಾಶ ಕೊಟ್ಟು ನೋಡಬಹುದು ಎಂದು ಹೇಳಿತು.
ಇದನ್ನೂ ಓದಿ :ಪ್ರೇಮ ವಿವಾಹ, 2 ವರ್ಷ ಸಂಸಾರ: ಪತಿ 12ನೇ ತರಗತಿ ಓದಿದ್ದು ತಿಳಿದು ವಿಚ್ಛೇದನ ಮೊರೆ ಹೋದ ಪತ್ನಿ!
ಆದ್ರೆ, ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ತಮ್ಮ ವೈವಾಹಿಕ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿದ್ದಾರೆ ಎಂದು ಇಬ್ಬರ ಪರ ವಕೀಲರು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು. ಬಳಿಕ ಮನವಿ ಆಲಿಸಿದ ಪೀಠವು ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13ಬಿ ಅಡಿ ಕೆಲವು ನಿಯಮ ಹಾಗೂ ಷರತ್ತುಗಳಿಗೆ ಒಳಪಟ್ಟು ಪರಸ್ಪರ ಒಪ್ಪಿಗೆಯ ಮೇರೆಗೆ ದಂಪತಿ ವಿಚ್ಛೇದನ ಪಡೆದುಕೊಳ್ಳಲು ಅವಕಾಶ ನೀಡಿದೆ. ಜೊತೆಗೆ, ಪತ್ನಿಗೆ ಶಾಶ್ವತ ಜೀವನಾಂಶವಾಗಿ ಒಟ್ಟು 12.51 ಲಕ್ಷ ರೂ ನೀಡಲು ಗಂಡ ಒಪ್ಪಿಕೊಂಡಿದ್ದಾನೆ ಎಂದು ವಕೀಲರು ಹೇಳಿದ್ದಾರೆ.
ಇದನ್ನೂ ಓದಿ :ಸಲಿಂಗ ವಿವಾಹ: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನೂ ಪ್ರತಿವಾದಿಯನ್ನಾಗಿಸಲು ಕೇಂದ್ರದ ಒತ್ತಾಯ
ಇನ್ನು ಏಪ್ರಿಲ್ 19 ರಂದು ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿವಾದಿಗಳನ್ನಾಗಿ ಮಾಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಹೊಸ ಅಫಿಡವಿಟ್ ಸಲ್ಲಿಸಿದೆ. ಪ್ರಸ್ತುತ ಪ್ರಕರಣವು ಸಂವಿಧಾನದ 7ನೇ ನಿಯಮದ ಅಡಿ "ರಾಜ್ಯಗಳ ಶಾಸಕಾಂಗ ಹಕ್ಕುಗಳು ಮತ್ತು ರಾಜ್ಯಗಳ ನಿವಾಸಿಗಳ ಹಕ್ಕುಗಳನ್ನು ಒಳಗೊಂಡಿರುತ್ತದೆ"ಎಂದು ಜಂಟಿ ಕಾರ್ಯದರ್ಶಿ ಮತ್ತು ಶಾಸಕಾಂಗ ವಕೀಲ ಕೆ.ಆರ್.ಸಜಿ ಕುಮಾರ್ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ :ಅಶ್ಲೀಲ ಚಾಟ್ ಮೂಲಕ ಹಣ ಸಂಪಾದನೆ; ಕೋರ್ಟ್ ಮೆಟ್ಟಿಲೇರಿದ ಮಹಿಳೆಯ ಕತೆ!