ಕರ್ನಾಟಕ

karnataka

ETV Bharat / bharat

NEET-PG ಪ್ರವೇಶ : ಒಬಿಸಿಗಳಿಗೆ ಶೇ.27 ಹಾಗೂ ಆರ್ಥಿಕ ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ

2021-22ನೇ ಸಾಲಿಗೆ ಒಬಿಸಿಗಳಿಗೆ ಶೇ.27 ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ.10ರಷ್ಟು ಕೋಟಾದೊಂದಿಗೆ ನೀಟ್​ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ..

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

By

Published : Jan 7, 2022, 11:43 AM IST

ನವದೆಹಲಿ: ನೀಟ್ ಪಿಜಿ ಪ್ರವೇಶದಲ್ಲಿ ಇಡಬ್ಲ್ಯುಎಸ್‌ ವರ್ಗದ ಮೀಸಲು ಕೋಟಾಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.

2021-22ನೇ ಸಾಲಿಗೆ ಒಬಿಸಿಗಳಿಗೆ ಶೇ.27 ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ.10ರಷ್ಟು ಕೋಟಾದೊಂದಿಗೆ ನೀಟ್​ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

ಆರ್ಥಿಕವಾಗಿ ದುರ್ಬಲ ವರ್ಗದ (EWS)ವರಿಗೆ ನೀಟ್-ಪಿಜಿ ಮತ್ತು ಯುಜಿ ಪ್ರವೇಶದಲ್ಲಿ ಮೀಸಲಾತಿ ಕುರಿತಾದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ಒಬಿಸಿಗಳಿಗೆ ಶೇ.27 ಪ್ರತಿಶತ ಮೀಸಲಾತಿ ನೀಡುವ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿದ್ದಾರೆ. ಜೊತೆಗೆ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಈ ವರ್ಷ ಶೇ.10 ಮೀಸಲಾತಿ ಅನ್ವಯಿಸುತ್ತದೆ ಎಂದು ತಿಳಿಸಿ ಅಂತಿಮ ತೀರ್ಪು ನೀಡಿದ್ದಾರೆ.

ABOUT THE AUTHOR

...view details