ಕರ್ನಾಟಕ

karnataka

ETV Bharat / bharat

SBI ನಲ್ಲಿವೆ 2056 ಖಾಲಿ ಹುದ್ದೆಗಳು.. ಅರ್ಹರು ಈ ಕೂಡಲೇ ಅರ್ಜಿ ಸಲ್ಲಿಸಿ - Online registration begins for over 2056 Probationary Officer vacancies

ಕರ್ನಾಟಕ ಸೇರಿದಂತೆ ದೇಶಾದ್ಯಂತ ಎಸ್​ಬಿಐ ತನ್ನ ಶಾಖಾ ಕಚೇರಿಗಳಲ್ಲಿ ಖಾಲಿಯಿರುವ ಪ್ರೊಬೇಷನರಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.

SBI PO posts
SBI PO posts

By

Published : Oct 5, 2021, 7:17 PM IST

ಹೈದರಾಬಾದ್​: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದಲ್ಲಿ 2,056 ಪ್ರೊಬೇಷನರಿ ಆಫೀಸರ್​​ (ಪಿಒ) ಹುದ್ದೆಗಳು ಖಾಲಿಯಿದ್ದು, ಇವುಗಳ ಭರ್ತಿಗೆ ಬ್ಯಾಂಕ್​ ಅಧಿಸೂಚನೆಯನ್ನು ಹೊರಡಿಸಿದೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತ ಎಸ್​ಬಿಐ ತನ್ನ ಶಾಖಾ ಕಚೇರಿಗಳಲ್ಲಿ ಖಾಲಿಯಿರುವ ಪ್ರೊಬೇಷನರಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ (sbi.co.in)ನ ಉದ್ಯೋಗ ವಿಭಾಗದಲ್ಲಿ ಅಧಿಸೂಚನೆಯನ್ನು ಪರಿಶೀಲಿಸಬಹುದು.

ನೋಂದಣಿ ಪ್ರಕ್ರಿಯೆ ಆರಂಭ

ಇಂದಿನಿಂದ (ಅಕ್ಟೋಬರ್ 5) ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅಕ್ಟೋಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಪರಿಶಿಷ್ಟ ಜಾತಿ/ಪಂಗಡದ ಆಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಿಲಾಗಿದ್ದು, ಇತರರಿಗೆ 750 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ

  • SBI PO ಹುದ್ದೆಗಳಿಗೆ ಅಭ್ಯರ್ಥಿಗಳು ಮೊದಲು ಪ್ರಾಥಮಿಕ ಮತ್ತು ಮುಖ್ಯ ಲಿಖಿತ ಪರೀಕ್ಷೆ ಬರೆಯಬೇಕು. ಆ ಬಳಿಕ ಸಂದರ್ಶನವಿರಲಿದ್ದು, ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
  • ಇದೇ ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ನೇಮಕಾತಿಯ ಮೊದಲ ಹಂತ ಅಥವಾ ಪ್ರಾಥಮಿಕ ಪರೀಕ್ಷೆ ಆನ್‌ಲೈನ್ ಮೂಲಕ ನಡೆಯಲಿದ್ದು, ಡಿಸೆಂಬರ್​ನಲ್ಲಿ ಫಲಿತಾಂಶ ಘೋಷಿಸಲಾಗುತ್ತದೆ.
  • ಅದೇ ತಿಂಗಳೇ ಆನ್‌ಲೈನ್ ಮುಖ್ಯ ಪರೀಕ್ಷೆ ನಡೆಯಲಿದ್ದು, 2022ರ ಜನವರಿಯಲ್ಲಿ ಫಲಿತಾಂಶ ಘೋಷಿಸಲಾಗುತ್ತದೆ.
  • ಸಂದರ್ಶನಗಳು 2022ರ ಫೆಬ್ರವರಿ 2 ಅಥವಾ 3 ನೇ ವಾರದಲ್ಲಿ ನಡೆಸಲಾಗುತ್ತದೆ.
  • ಅಂತಿಮ ಫಲಿತಾಂಶಗಳನ್ನು ಫೆಬ್ರವರಿ/ಮಾರ್ಚ್​ನಲ್ಲಿ ಘೋಷಿಸಲಾಗುತ್ತದೆ.

ಅರ್ಹತೆ

  • ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
  • ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಪದವಿ ಪಡೆದಿರಬೇಕು.
  • ತಮ್ಮ ಪದವಿ ಅಂತಿಮ ವರ್ಷ/ಸೆಮಿಸ್ಟರ್‌ನಲ್ಲಿರುವವರು ಸಹ ಅರ್ಜಿ ಸಲ್ಲಿಸಬಹುದು.
  • ಆದರೆ, ಸಂದರ್ಶನಕ್ಕೆ ಕರೆದರೆ ಅವರು 2021ರ ಡಿಸೆಂಬರ್ 31 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ಪುರಾವೆಗಳನ್ನು ಒದಗಿಸಬೇಕು.
  • ಚಾರ್ಟರ್ಡ್ ಅಕೌಂಟೆಂಟ್‌ ಅಥವಾ ವೆಚ್ಚ ಲೆಕ್ಕಾಧಿಕಾರಿಗಳು ಸಹ ಅರ್ಜಿ ಸಲ್ಲಿಸಬಹುದು.
  • ಅಭ್ಯರ್ಥಿಗಳ ವಯೋಮಿತಿ 2021ರ ಏಪ್ರಿಲ್ 1 ರಂತೆ 21 ರಿಂದ ಮತ್ತು 30 ವರ್ಷ ವಯಸ್ಸಿನರಾಗಿರಬೇಕು
  • ಅಂದರೆ, ಅಭ್ಯರ್ಥಿಗಳು 1991ರ ಎಪ್ರಿಲ್ 2 ಕ್ಕಿಂತ ಮುಂಚೆ ಅಥವಾ 2000ರ ಎಪ್ರಿಲ್ 1ಕ್ಕಿಂತ ನಂತರ ಜನಿಸಿರಬಾರದು.
  • ಕೆಲವು ವರ್ಗದ ಅಭ್ಯರ್ಥಿಗಳಿಗೆ (ಎಸ್‌ಸಿ, ಎಸ್‌ಟಿ, ಒಬಿಸಿ, ಪಿಡಬ್ಲ್ಯುಡಿ ಇತ್ಯಾದಿ) ವಯೋಮಿತಿಯ ಸಡಿಲಿಕೆ ಇದೆ. ಇದನ್ನು ಎಸ್​ಬಿಐ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.

ಹೆಚ್ಚಿನ ಮಾಹಿತಿ ಹಾಗೂ ಅಪ್‌ಡೇಟ್ಸ್​ಗಾಗಿ ಎಸ್‌ಬಿಐ ಅಧಿಕೃತ ಉದ್ಯೋಗ ವೆಬ್‌ಸೈಟ್www.sbi.co.in/careersಗೆ ಭೇಟಿ ನೀಡಿ ಪರಿಶೀಲಿಸಬಹುದು.

ABOUT THE AUTHOR

...view details