ಕರ್ನಾಟಕ

karnataka

ETV Bharat / bharat

ಸತ್ಯೇಂದ್ರ ಜೈನ್ ವಿಡಿಯೋ ವೈರಲ್; ಎಎಪಿ ವಿರುದ್ಧ ಮುಗಿಬಿದ್ದ ಬಿಜೆಪಿ - ಸತ್ಯೇಂದ್ರ ಜೈನ್ ವಿಡಿಯೋ ವೈರಲ್

ಸತ್ಯೇಂದ್ರ ಜೈನ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನವಾಲಾ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ.

Satyendar Jain getting massage in jail video
ಸತ್ಯೇಂದ್ರ ಜೈನ್ ವೀಡಿಯೋ ವೈರಲ್ ; ಶಹಜಾದ್ ಪೂನವಾಲಾ ಕಿಡಿ

By

Published : Nov 19, 2022, 4:49 PM IST

Updated : Nov 19, 2022, 6:31 PM IST

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ಸತ್ಯೇಂದ್ರ ಜೈನ್ ದೆಹಲಿಯ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಹಳೆಯ ವಿಡಿಯೋವೊಂದು ವೈರಲ್​ ಆಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸತ್ಯೇಂದ್ರ ಜೈನ್‌ ಬಂಧನದಲ್ಲಿದ್ದಾರೆ.

ಆದರೆ ತಿಹಾರ್ ಜೈಲಿನಲ್ಲಿ ಅವರಿಗೆ ವಿಐಪಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನವಾಲಾ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ಪ್ರಕರಣದ ಬಗ್ಗೆ ನೇರವಾಗಿ ಪ್ರಶ್ನೆಗಳನ್ನು ಎತ್ತಿದ್ದಾರೆ.

ಸತ್ಯೇಂದ್ರ ಜೈನ್ ವಿಡಿಯೋ ವೈರಲ್; ಎಎಪಿ ವಿರುದ್ಧ ಮುಗಿಬಿದ್ದ ಬಿಜೆಪಿ

ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಬಂಧಿತರಾಗಿರುವ ಸತ್ಯೇಂದ್ರ ಜೈನ್ ಶಿಕ್ಷೆಗೆ ಗುರಿಯಾಗುವ ಬದಲು ಆನಂದಿಸುತ್ತಿದ್ದಾರೆ. ಹವಾಲಾ ಆರೋಪದ ಮೇಲೆ ಜೈಲಿನಲ್ಲಿರುವ ಸತ್ಯೇಂದ್ರ ಜೈನ್‌ಗೆ ಕಳೆದ 5 ತಿಂಗಳಿಂದ ಜಾಮೀನು ಸಿಗುತ್ತಿಲ್ಲ. ಅವರ ಜಾಮೀನು ಅರ್ಜಿಯನ್ನು ನಿರಂತರವಾಗಿ ತಿರಸ್ಕರಿಸಲಾಗುತ್ತಿದೆ. ಹೀಗಿದ್ದರೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇನ್ನೂ ಸಚಿವರನ್ನಾಗಿಯೇ ಉಳಿಸಿಕೊಂಡಿದ್ದಾರೆ.

ಸತ್ಯೇಂದ್ರ ಜೈನ್ ಅವರನ್ನು ಸಚಿವರನ್ನಾಗಿ ಉಳಿಸಿಕೊಂಡಿದ್ದು, ವಿವಿಐಪಿ ಸೌಲಭ್ಯ ಪಡೆದು, ಮಾಸಾಶನ ಪಡೆದು ಜೈಲಿನಲ್ಲಿ ವಿವಿಐಪಿಯಂತೆ ಬದುಕುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿ ಕ್ರಿಮಿನಲ್‌ಗಳಿಗಾಗಿ ಮಸಾಜ್ ಪಾರ್ಲರ್ ಅನ್ನು ತೆರೆದಿದ್ದಾರೆ ಎಂದು ಕಾಣಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಸತ್ಯೇಂದ್ರ ಜೈನ್ ವಿಡಿಯೋ ವೈರಲ್

ವಿಡಿಯೋ ಹೊರಬಿದ್ದ ಬಳಿಕ ಸತ್ಯೇಂದ್ರ ಜೈನ್ ಅವರು ದೆಹಲಿ ಸರ್ಕಾರದ ಅಧೀನದಲ್ಲಿರುವ ತಿಹಾರ್ ಜೈಲಿನಿಂದ ಹೇಗೆ ಹಣ ಸುಲಿಗೆ ಮಾಡುತ್ತಿದ್ದ ಎಂಬುದು ಸ್ಪಷ್ಟವಾಗಿದೆ. ಇಂತಹ ವಿಷಯಗಳು ಮುನ್ನೆಲೆಗೆ ಬಂದ ನಂತರವೂ ಸತ್ಯೇಂದ್ರ ಜೈನ್ ಅವರನ್ನು ಸಚಿವರನ್ನಾಗಿ ಉಳಿಸಿಕೊಳ್ಳುವರೇ? ಎಂಬುದು ಪ್ರಶ್ನೆಯಾಗಿದೆ ಎಂದು ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಬಿಜೆಪಿ ಪ್ರಶ್ನೆ ಮಾಡಿದೆ.

ಅವರಿಗೆ ಜೈಲಿನಲ್ಲಿ ಇತರ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಈ ಎಲ್ಲ ಘಟನೆಗಳು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಜೈಲು ಅಧಿಕಾರಿಗಳ ಸಹಕಾರವಿಲ್ಲದೇ ಇದು ಸಾಧ್ಯವಿಲ್ಲ ಎಂದು ಪೂನವಾಲಾ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಜೈಲು ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಬಿಜೆಪಿ ವಕ್ತಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಭರ್ಜರಿ ಆತಿಥ್ಯ.. ತಿಹಾರ್ ಜೈಲಿನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್​ಗೆ ಮಸಾಜ್- ಸಿಸಿಟಿವಿ ವಿಡಿಯೋ

Last Updated : Nov 19, 2022, 6:31 PM IST

ABOUT THE AUTHOR

...view details