ಫತೇಪುರ್ (ಉತ್ತರ ಪ್ರದೇಶ) : ಫತೇಪುರ್ ಜಿಲ್ಲೆಯ ಹರಿಹರಗಂಜ್ ಇಸಿಐ ಚರ್ಚ್‌ನಲ್ಲಿ ಮತಾಂತರ ನಡೆದಿದೆ ಎಂದು ಪ್ರಕರಣ ದಾಖಲಿಸಲಾಗಿದೆ. ಈ ಚರ್ಚ್‌ನಲ್ಲಿ 90 ಹಿಂದೂಗಳ ಸಾಮೂಹಿಕ ಮತಾಂತರ ನಡೆದಿದೆ ಎಂದು ದೂರು ದಾಖಲಿಸಲಾಗಿದೆ. ನೈನಿ ಅಗ್ರಿಕಲ್ಚರ್ ಶುವಾಟ್ಸ್ ಎಂಬ ಸಂಸ್ಥೆಯು (Sam Higginbottom University of Agriculture, Technology And Sciences) ಈ ಮತಾಂತರಗಳಿಗೆ ಫಂಡಿಂಗ್ ಮಾಡುತ್ತಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಹೆಸರಿಸಲಾದ 47 ಮತ್ತು 20 ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಇಸಿಐ ಚರ್ಚ್‌ನಲ್ಲಿ ಇದು ನಾಲ್ಕನೇ ಮತಾಂತರ ಪ್ರಕರಣವಾಗಿದೆ. ಮಾಲ್ವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾರಾಪುರ ಅಸ್ವರ್ ನಿವಾಸಿ ಸತ್ಯಪಾಲ್ ಎಂಬುವರು ಕಳೆದ ಏಪ್ರಿಲ್‌ನಲ್ಲಿ ಸಾಮೂಹಿಕ ಮತಾಂತರ ನಡೆದಿದೆ ಎಂದು ಆರೋಪಿಸಿ ಇವಾಂಜೆಲಿಕಲ್ ಚರ್ಚ್ ಆಫ್ ಇಂಡಿಯಾ (ಇಸಿಐ) ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಮತಾಂತರ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದ ಸತ್ಯಪಾಲ್, ಮಿಷನ್ ಆಸ್ಪತ್ರೆಯಲ್ಲಿ ವಾಸಿಸುತ್ತಿರುವ ಭಿತೌರಾ ಪಿಎಚ್‌ಸಿಯಲ್ಲಿ ನಿಯೋಜನೆಗೊಂಡ ಎಎನ್‌ಎಂ ಲಿಲಿ ಸಿ ಅವರನ್ನು ಭೇಟಿಯಾದೆವು ಮತ್ತು ಚರ್ಚ್‌ನಲ್ಲಿ 90 ಹಿಂದೂಗಳೊಂದಿಗೆ ಮತಾಂತರಗೊಂಡೆವು. 40 ದಿನಗಳ ಪ್ರಕ್ರಿಯೆಯ ನಂತರ, SHUATS ಕೊಳದಲ್ಲಿ ಸ್ನಾನ ಮಾಡಿದೆವು ಎಂದು ಹೇಳಿದ್ದಾರೆ. ಮತಾಂತರದ ನಂತರ ಸತ್ಯಪಾಲ್ ಹೆಸರನ್ನು ಸ್ಯಾಮ್ಸನ್ ಎಂದು ಬದಲಾಯಿಸಲಾಗಿದೆ. ಮತಾಂತರ ಘಟನೆಗೂ ನೈನಿ ಕೃಷಿ SHUATS ಗೂ ಲಿಂಕ್ ಇದೆ ಎನ್ನಲಾಗಿದೆ. ಹೆಸರು ತಿಳಿದ 47 ಜನ ಮತ್ತು 20 ಅಪರಿಚಿತರ ವಿರುದ್ಧ ಫೋರ್ಜರಿ, ಮತಾಂತರ, ವಂಚನೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಸರ್ಕಲ್ ಅಧಿಕಾರಿ ವೀರ್ ಸಿಂಗ್ ತಿಳಿಸಿದ್ದಾರೆ.