ನವದೆಹಲಿ:ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಇಡೀ ದೇಶವೇ ಶೋಕದಲ್ಲಿ ಮುಳುಗಿದೆ. ಈಟಿವಿ ಭಾರತ ನಡೆಸಿದ ಸಂದರ್ಶನದಲ್ಲಿ ಹಿರಿಯ ಕಲಾವಿದ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ನೆನಪುಗಳನ್ನು ಮೆಲುಕು ಹಾಕಿದರು.
ನಮ್ಮೆಲ್ಲರಿಂದ ಯಾರೋ ಒಬ್ಬರು ಬೇರ್ಪಟ್ಟಂತೆ ತೋರುವ ಹಾಗೆ ಅವರ ಅಗಲುವಿಕೆ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲಿ ನೋವು ಉಂಟು ಮಾಡಿದೆ. ಅವರ ಹಾಡುಗಳು, ಸಂಗೀತ ಮತ್ತು ಗಾಯನ ಕೇಳುತ್ತಾ ಬೆಳೆದಿದ್ದೇವೆ. ಲತಾ ದೀದಿ ನಮಗೆ ಸ್ಫೂರ್ತಿ ಎಂದು ಕಾಂಗ್ರೆಸ್ ನಾಯಕ ಸಿನ್ಹಾ ನೆನಪಿಸಿಕೊಂಡರು.
ನಾನು ಧರ್ಮೇಂದ್ರ ಜಿ ಅವರನ್ನು ತುಂಬಾ ನಂಬಿದ್ದೇನೆ ಮತ್ತು ರಾಜ್ ಕಪೂರ್ ಅವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದೇನೆ ಎಂದು ಲತಾ ದೀದಿ ಹೇಳಿದ್ದರು. ದಿಲೀಪ್ ಕುಮಾರ್ ಸಾಹೇಬರು ಅವಳನ್ನು ತಂಗಿ ಎಂದು ಪರಿಗಣಿಸಿದ್ದರು. ಆದರೆ ಅವರು ಶ್ರೇಷ್ಠ ಕಲಾವಿದರನ್ನು ಮಾತ್ರವಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು ಎಂದರು.
ಲತಾ ಮಂಗೇಶ್ಕರ್ ನಿಧನಕ್ಕೆ ಶತ್ರುಘ್ನ ಸಿನ್ಹಾ ಸಂತಾಪ ದೀದಿ ಯಾವಾಗಲೂ ನನ್ನನ್ನು ಮಾತ್ರವಲ್ಲದೆ ನನ್ನ ಇಡೀ ಕುಟುಂಬವನ್ನು ನೆನಪಿಸಿಕೊಳ್ಳುತ್ತಿದ್ದರು. ನನ್ನ ಮಗಳು ಸೋನಾಕ್ಷಿಯ ಕಾರ್ಯವನ್ನು ಹಲವಾರು ಬಾರಿ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಎಂದು ಲತಾ ದೀದಿ ನೆನಪುಗಳನ್ನು ಶತ್ರುಘ್ನ ಸಿನ್ಹಾ ಹಂಚಿಕೊಂಡರು.
ಓದಿ:ಮನೆ ಜವಾಬ್ದಾರಿ ಹೊತ್ತ ಲತಾ ತಾಯಿ ಅಭಿನಯಕ್ಕೂ ಸೈ.. ದೈವದತ್ತ ವರ ಸಂಗೀತವೇ ಉತ್ತುಂಗಕ್ಕೇರಿಸಿತು..
ಲತಾ ಜೀ 13ನೇ ವಯಸ್ಸಿನಲ್ಲಿ ಮನೆಯನ್ನು ತೊರೆದರು. ಯಾವುದೇ ಗಾಡ್‌ಫಾದರ್ ಇಲ್ಲದೆ ನಮಗೆಲ್ಲರಿಗೂ ಗಾಯನ ಮೂಲಕ ಸ್ಫೂರ್ತಿಯಾದರು. ನಾನೇ ಆಗಿರಲಿ, ಧರ್ಮೇಂದ್ರ ಜಿ ಅಥವಾ ಅಮಿತಾಭ್ ಬಚ್ಚನ್ ಜೀ ಆಗಿರಲಿ ಎಲ್ಲರೂ ಆರಂಭದಲ್ಲಿ ಹಾಡಲು ಕಷ್ಟ ಪಡುತ್ತಿದ್ದೇವು. ಆದರೆ ಲತಾ ಜಿಯಿಂದ ಸ್ಫೂರ್ತಿ ಪಡೆದ ನಂತರ ನಾವು ಹಾಡುವುದನ್ನು ಕಲಿತ್ತೇವು. ಅದಕ್ಕಾಗಿಯೇ ಅವರು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.
92ನೇ ವಯಸ್ಸಿನಲ್ಲಿಯೂ ಅವರು ತುಂಬಾ ಆರೋಗ್ಯವಾಗಿದ್ದರು ಮತ್ತು ಅವರು ತುಂಬಾ ನಗುತ್ತಿದ್ದರು. ಅದಕ್ಕಾಗಿಯೇ ಅವರ ನಿಧನವು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ವಿಶೇಷವಾಗಿ ನಾನು ವೈಯಕ್ತಿಕವಾಗಿ ತುಂಬಾ ದುಃಖಿತನಾಗಿದ್ದೇನೆ ಎಂದರು.
ಲತಾ ಜಿ ಅವರ ಉದ್ದೇಶ ಬೇರೆಯೇ ಆಗಿತ್ತು, ಅವರು ಎಲ್ಲಾ ವಯಸ್ಸಿನ ನಾಯಕಿಯರಿಗೆ ತಮ್ಮ ಧ್ವನಿಯನ್ನು ನೀಡಿದರು. ಹೊಸ ನಾಯಕಿಯ ಧ್ವನಿಯಾಗಲಿ, ಹಳೆ ನಾಯಕಿಯ ಹಾಡುಗಳ ಗಾಂಭೀರ್ಯವಿರಲಿ, ಪ್ರತಿ ಚಿತ್ರದಲ್ಲೂ ಅವರ ಕಂಠ ಅಮರವಾಯಿತು. ಲತಾ ಜೀ ಅವರ ಜನ್ಮದಿನದಂದು ಅವರು ಶುಭಾಶಯ ಕೋರಿದ ರೀತಿಯೂ ತುಂಬಾ ವೈರಲ್ ಆಗಿದ್ದಕ್ಕಾಗಿ ನಾನು ಪ್ರಧಾನಿಯನ್ನು ಅಭಿನಂದಿಸುತ್ತೇನೆ. ಅವರು ಅಭಿನಂದಿಸಿದ ರೀತಿ ಮತ್ತು ಇಂದು ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ ರೀತಿ ಕೂಡ ಶ್ಲಾಘನೀಯ ಎಂದರು.
ಓದಿ:ಪಂಚಭೂತಗಳಲ್ಲಿ ಲೀನವಾದ ನೈಟಿಂಗೇಲ್ ಆಫ್ ಇಂಡಿಯಾ
ಈಗಿನ ಪ್ರಧಾನಿಯಾಗಲಿ ಅಥವಾ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಾಗಲಿ, ಲತಾ ಜೀ ಅವರು ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧವನ್ನು ನಾವು ನೋಡಿದ್ದೇವೆ. ಲತಾ ದೀದಿ ಕ್ರಿಕೆಟ್‌ನ ದೊಡ್ಡ ಅಭಿಮಾನಿಯೂ ಆಗಿದ್ದರು. ಒಳ್ಳೆಯ ಆಟ ಆಡುವವರನ್ನು ಮತ್ತು ಚೆನ್ನಾಗಿ ಆಡಲಾರದವರನ್ನು ಸಹ ಪ್ರೋತ್ಸಾಹಿಸುತ್ತಿದ್ದರು. ಅದು ಅವರ ಉದಾತ್ತತೆ ಎಂದು ಸಿನ್ಹಾ ಅವರು ನೆನೆಪುಗಳನ್ನು ಹಂಚಿಕೊಂಡರು.