ಸತ್ನಾ(ಮಧ್ಯಪ್ರದೇಶ):ಜಿಲ್ಲೆಯ ಹಿನೌತಾ ಗ್ರಾಮದಲ್ಲಿ ಶಾಲೆಯೊಂದು ಇದೆ. ಈ ಶಾಲೆಗೆ ಒಬ್ಬರೇ ವಿದ್ಯಾರ್ಥಿ ಮತ್ತು ಒಬ್ಬರೇ ಶಿಕ್ಷಕರು. ಅಷ್ಟೇ ಅಲ್ಲ ಕಳೆದ 5 ವರ್ಷಗಳಿಂದ ಈ ಶಾಲೆಯ ಬೀಗವೇ ತೆರೆದಿಲ್ಲ, ಕಪ್ಪು ಹಲಗೆಯ ಮೇಲೆ ಒಂದು ಅಕ್ಷರವೂ ಮೂಡಿಲ್ಲ. ಈ ವಿಚಾರದಲ್ಲಿ ಉಸ್ತುವಾರಿ ಸಚಿವರು ತಮ್ಮದೇ ರಾಗ ನುಡಿಯುತ್ತಿದ್ರೆ, ಜಿಲ್ಲಾ ಪಂಚಾಯಿತಿ ಸಿಇಒ ಕ್ರಮದ ಬಗ್ಗೆ ಮಾತನಾಡ್ತಿದ್ದಾರೆ.
ರಾಜ್ಯ ಸರ್ಕಾರವು ಶಿಕ್ಷಣವನ್ನು ಉತ್ತೇಜಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಬೇಕಾದ ಸೌಲಭ್ಯಗಳನ್ನು ಸಹ ಒದಗಿಸಲು ಯತ್ನಿಸುತ್ತಿದೆ. ಆದ್ರೆ ಕೆಲ ಶಿಕ್ಷಕರು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಆಯಾಗಿ ನಿದ್ದೆ ಮಾಡ್ತಿದ್ದಾರೆ. ಇಂತಹದೊಂದು ಘಟನೆ ಮಧ್ಯಪ್ರದೇಶದ ಸತ್ನಾ ಪ್ರಧಾನ ಕಚೇರಿಯಿಂದ ಕೆಲವೇ ಕಿಲೋಮೀಟರ್ಗಳಷ್ಟು ದೂರದಲ್ಲಿರುವ ಬಿರ್ಸಿಂಗ್ಪುರ ತಾಲೂಕಿನ ಹಿನೌತಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಂಡು ಬಂದಿದೆ. . ಶಾಲೆಗೆ ತೆರಳಲು ರಸ್ತೆಯೇ ಇಲ್ಲ. ಶಾಲೆ ಸುತ್ತ-ಮುತ್ತ ರೈತರು ಉಳುಮೆ ಮಾಡಿದ್ದಾರೆ.
ಒಬ್ಬ ವಿದ್ಯಾರ್ಥಿಗೆ ಒಬ್ಬನೇ ಶಿಕ್ಷಕ:ಈ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇರೋದು ಒಬ್ಬ ವಿದ್ಯಾರ್ಥಿ. ಆ ವಿದ್ಯಾರ್ಥಿಗೆ ಒಬ್ಬ ಶಿಕ್ಷಕನನ್ನು ಸರ್ಕಾರ ನೇಮಿಸಿದೆ. ಆದರೆ ವಿಪರ್ಯಾಸ ಎಂದರೆ ಕಳೆದ 5 ವರ್ಷಗಳಿಂದ ಈ ಶಾಲೆಯ ಬಾಗಿಲೇ ತೆರೆದಿಲ್ಲ. ಹಾಗಾಗಿ ಶಾಲೆಯ ಕುರ್ಚಿ - ಮೇಜಿನ ಮೇಲೆ ಧೂಳಿನ ರಾಶಿ ಬಿದ್ದಿದೆ. ಈ ಶಾಲೆಯ ಶಿಕ್ಷಕ ವಿದ್ಯಾರ್ಥಿಗಳ ಹಾಜರಾತಿಯನ್ನು ತಮ್ಮ ಇಷ್ಟದಂತೆ ತಪ್ಪಾಗಿ ನಮೂದಿಸಿ ಸರ್ಕಾರದಿಂದ ಸಂಬಂಳ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಆ ಒಬ್ಬ ವಿದ್ಯಾರ್ಥಿಯೂ ಸಹ ಇತನ ಸ್ನೇಹಿತನಾಗಿದ್ದು, ಆತನಿಗೆ 45 ವರ್ಷ ವಯಸ್ಸಾಗಿದೆ.
ಸ್ನೇಹಿತನನ್ನೇ ವಿದ್ಯಾರ್ಥಿಯನ್ನಾಗಿ ಮಾಡಿದ ಶಿಕ್ಷಕ: ಶಾಲೆಯ ಶಿಕ್ಷಕ ವಿಜಯ್ ಕುಮಾರ್ ವರ್ಮಾ ಗ್ರಾಮದ ನಿವಾಸಿಯಾಗಿರುವ ದೀಪು ಮಿಶ್ರಾ ಜೊತೆಗೆ ಸ್ನೇಹ ಬೆಳೆಸಿದ್ದಾನೆ. ಅಷ್ಟೇ ಅಲ್ಲ ಇತನ ಹೆಸರನ್ನು ತಮ್ಮ ಶಾಲೆಯಲ್ಲಿ ನೊಂದಾಯಿಸಿದ್ದಾರೆ. 1 ಮತ್ತು 2 ನೇ ತರಗತಿಯ ವಿದ್ಯಾರ್ಥಿ ಎಂದು ತಪ್ಪಾಗಿ ನೋಂದಾಯಿಸಿ ಶಾಲೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದಾನೆ ಈ ಶಿಕ್ಷಕ.