ಕರ್ನಾಟಕ

karnataka

ETV Bharat / bharat

ಅಜ್ಜನ ಪ್ರಾಯದಲ್ಲಿ ಅಪ್ಪನಾದ.. ಏಕಕಾಲಕ್ಕೆ ಮೂರು ಮಕ್ಕಳಿಗೆ ಜನ್ಮ ನೀಡಿದ್ಲು ವೃದ್ಧನ ಪತ್ನಿ!

ಮಧ್ಯಪ್ರದೇಶದಲ್ಲಿ ಪವಾಡದಂತಹ ಘಟನೆ ನಡೆದಿದೆ. 62 ವರ್ಷದ ವೃದ್ಧನ 30 ರ ಪ್ರಾಯದ ಪತ್ನಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅಜ್ಜನ ಪ್ರಾಯದಲ್ಲಿ ಅಪ್ಪನಾದ ವ್ಯಕ್ತಿ ಸಂತಸದಿಂದ ಕುಣಿದಾಡಿದ್ದಾನೆ.

By

Published : Jun 14, 2023, 12:59 PM IST

ಅಜ್ಜನ ಪ್ರಾಯದಲ್ಲಿ ಅಪ್ಪನಾದ
ಅಜ್ಜನ ಪ್ರಾಯದಲ್ಲಿ ಅಪ್ಪನಾದ

ಸತನಾ(ಮಧ್ಯಪ್ರದೇಶ):ಆಧುನಿಕ ಜೀವನದ ಒತ್ತಡ, ಅಸಮತೋಲನ ಆಹಾರ ಪದ್ಧತಿ ಮತ್ತು ಜೈವಿಕ ಗಡಿಯಾರದ ಏರುಪೇರಿನಿಂದಾಗಿ ಈಗಿನ ಯುವ ದಂಪತಿಗೆ ಮಕ್ಕಳಾಗುವುದೇ ಸವಾಲಾಗಿದೆ. ವಿಚಿತ್ರ ಸಂಗತಿಯೆಂದರೆ ಇಲ್ಲೊಬ್ಬ ವೃದ್ಧ ವ್ಯಕ್ತಿ ತಂದೆಯಾಗಿದ್ದಾರೆ. 62ನೇ ವಯಸ್ಸಿನಲ್ಲಿ ಏಕಕಾಲದಲ್ಲಿ ಒಂದಲ್ಲ, ಎರಡಲ್ಲ ಮೂವರು ಮಕ್ಕಳಿಗೆ ತಂದೆಯಾಗಿದ್ದಾರೆ. ಆತನ 2ನೇ ಪತ್ನಿ ಜೂನ್​ 13 ರಂದು ತ್ರಿಮೂರ್ತಿಗಳಿಗೆ ಜನ್ಮ ನೀಡಿದ್ದಾರೆ. ಮಕ್ಕಳ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ ಎಂಬುದು ಖೇದಕರ ಸಂಗತಿ.

ಮಧ್ಯಪ್ರದೇಶದ ಸತನಾ ಜಿಲ್ಲೆಯಲ್ಲಿ ಈ ಆಶ್ಚರ್ಯಕರ ವಿದ್ಯಮಾನ ಬೆಳಕಿಗೆ ಬಂದಿದೆ. ಜಿಲ್ಲೆಯ ಉಚ್ಚೆಹ್ರಾ ಬ್ಲಾಕ್‌ನ ಅತರ್ವೇಡಿಯಾ ಖುರ್ದ್ ಗ್ರಾಮದ ನಿವಾಸಿ ಗೋವಿಂದ್ ಕುಶ್ವಾಹ್​ (62 ವರ್ಷ) ಅವರ 2ನೇ ಪತ್ನಿ ಹೀರಾಬಾಯಿ ಕುಶ್ವಾಹ್​(30 ವರ್ಷ) ದಂಪತಿ ಮಂಗಳವಾರ ಬೆಳಗ್ಗೆ 3 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸೋಮವಾರ ರಾತ್ರಿ ವೃದ್ಧನ ಪತ್ನಿ ಹೀರಾಬಾಯಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿಯ ವೈದ್ಯರು ಗರ್ಭಿಣಿಯನ್ನು ಹೆರಿಗೆ ವಾರ್ಡ್‌ಗೆ ಸೇರಿಸಿದ್ದಾರೆ. ಪ್ರಸವ ನೋವು ಹೆಚ್ಚಾದ ಕಾರಣ, ಮಂಗಳವಾರ ಬೆಳಗ್ಗೆ ಹೀರಾಬಾಯಿ ಅವರಿಗೆ ಆಪರೇಷನ್​ ನಡೆಸಿದ್ದಾರೆ. ಈ ವೇಳೆ ಮೂವರು ಮಕ್ಕಳು ಜನಿಸಿವೆ.

ವೃದ್ಧ ತಂದೆಯ ಮುಖದಲ್ಲಿ ಸಂತಸ:ಮಕ್ಕಳಿಲ್ಲದ ವೃದ್ಧ ಗೋವಿಂದ್​ ಕುಶ್ವಾಹ್​ ಅವರ ಮನೆ, ಮನದಲ್ಲೀಗ ಮಂದಹಾಸ ಮೂಡಿದೆ. ಮೂವರು ಮಕ್ಕಳು ಜನ್ಮ ತಾಳಿದ್ದು, ಕುಟುಂಬಸ್ಥರಿಗೆ ಇನ್ನಿಲ್ಲದ ಸಂತಸ ತಂದಿದೆ. ಗೋವಿಂದ್​ ಕುಶ್ವಾಹ್​ ಅವರು ಕಸ್ತೂರಿಬಾಯಿ ಅವರನ್ನು ಮೊದಲ ಪತ್ನಿಯಾಗಿ ಸ್ವೀಕರಿಸಿದ್ದರು. ಅವರಿಗೆ ಒಂದು ಗಂಡು ಮಗು ಕೂಡ ಜನಿಸಿತ್ತು. ಆದರೆ, ಆತ 18 ವರ್ಷದವನಿದ್ದಾಗ ಅಪಘಾತದಲ್ಲಿ ತೀರಿಕೊಂಡಿದ್ದ. ಇದರಿಂದ ವಾರಸುದಾರನಿಲ್ಲದ ಕೊರಗು ಆ ಕುಟುಂಬವನ್ನು ಕಾಡುತ್ತಿತ್ತು.

ಇದನ್ನು ತಪ್ಪಿಸಲು ಮೊದಲ ಪತ್ನಿ ಕಸ್ತೂರಿಬಾಯಿ ಅವರು ತನ್ನ ಗಂಡನ ಮುಂದೆ ಎರಡನೇ ಮದುವೆಯ ಪ್ರಸ್ತಾಪವಿಟ್ಟಿದ್ದರು. ಅಲ್ಲದೇ ಕುಟುಂಬಸ್ಥರೂ ಇದಕ್ಕೆ ಒಪ್ಪಿಗೆ ನೀಡಿ 6 ವರ್ಷಗಳ ಹಿಂದೆ ಯುವತಿ ಹೀರಾಬಾಯಿ ಅವರೊಂದಿಗೆ ಮದುವೆ ಮಾಡಲಾಗಿತ್ತು. ಆದಾಗ್ಯೂ ಮಕ್ಕಳಾಗಿರಲಿಲ್ಲ.

ಇದೀಗ ಹೀರಾಬಾಯಿಗೆ ದೇವರು ಮೂವರು ಮಕ್ಕಳನ್ನು ಕರುಣಿಸಿದ್ದಾನೆ. ಆದರೆ, ತೊಡಕು ಎಂಬಂತೆ ಮಕ್ಕಳ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ. ಇದರಿಂದ ಮೂವರನ್ನೂ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಕ್ಕಳು ಆರೋಗ್ಯವಂತರಾಗಲಿ ಎಂದು ಕುಟುಂಬಸ್ಥರು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಇತ್ತ ತಾಯಿ ಹೀರಾಬಾಯಿ ಅವರು ಆರೋಗ್ಯದಿಂದ ಇದ್ದಾರೆ.

ಜಿಲ್ಲಾ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅಮರ್ ಸಿಂಗ್ ಮಾತನಾಡಿ, ‘ಮಂಗಳವಾರ ತಡರಾತ್ರಿ ಅತರ್ವೇಡಿಯಾ ಗ್ರಾಮದ ಹೀರಾಬಾಯಿ ಕುಶ್ವಾಹ್​ ಅವರನ್ನು ಹೆರಿಗೆ ನೋವಿನಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಗ್ಗೆ 6 ಗಂಟೆಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಸಾಮಾನ್ಯ ಹೆರಿಗೆ ಅವಧಿ 35 ವಾರಗಳಾಗಿದ್ದು, ಹೀರಾಬಾಯಿ ಅವರಿಗೆ 34 ವಾರಗಳಲ್ಲಿ ಹೆರಿಗೆ ಮಾಡಿಸಲಾಗಿದೆ. ಇದರಿಂದಾಗಿ ಶಿಶುಗಳು ದುರ್ಬಲವಾಗಿವೆ. ಆರೋಗ್ಯದಲ್ಲಿ ತುಸು ಏರುಪೇರಾಗಿದೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಏಳು ವರ್ಷದ ಬಳಿಕ ಏಕಕಾಲಕ್ಕೆ ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ.. ಆದರೆ?

ABOUT THE AUTHOR

...view details