ಕರ್ನಾಟಕ

karnataka

ETV Bharat / bharat

ಸಿಎಂ ರಾಜೀನಾಮೆ ಹೇಳಿಕೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಏನಂದ್ರು?

ವೈಯಕ್ತಿಕವಾಗಿ ಯಡಿಯೂರಪ್ಪ ಇದ್ದರೂ ಲಾಭ, ರಾಜೀನಾಮೆ ನೀಡಿದ್ರೂ ನಮ್ಮ ಪಕ್ಷಕ್ಕೆ ಲಾಭ ಇದ್ದೇ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಗೋಕಾಕಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Satish Jarakiholi
Satish Jarakiholi

By

Published : Jun 6, 2021, 2:23 PM IST

Updated : Jun 6, 2021, 2:31 PM IST

ಬೆಳಗಾವಿ: ಹೈಕಮಾಂಡ್ ಸೂಚಿಸಿದ್ರೆ ರಾಜೀನಾಮೆ ಕೊಡುವೆ ಎಂಬ ಬಿಎಸ್‌ವೈ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಗೋಕಾಕಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌

ಎಲ್ಲರನ್ನೂ ಒಟ್ಟಿಗೆ ಒಯ್ಯುವಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಫಲವಾಗಿರಬಹುದು. ಕೊರೊನಾದಲ್ಲಿ ಸಮಸ್ಯೆ ಅಂತೂ ಇದ್ದೇ ಇದೆ, ಸರಿಯಾಗಿ ನಿರ್ವಹಣೆ ಮಾಡಲಾಗಿಲ್ಲ. ರಾಜ್ಯದ ಜನತೆಗೆ ಎಲ್ಲವೂ ಗೊತ್ತಿದೆ. ವೈಯಕ್ತಿಕವಾಗಿ ಯಡಿಯೂರಪ್ಪ ಇದ್ದರೂ ಲಾಭ, ರಾಜೀನಾಮೆ ನೀಡಿದ್ರೂ ನಮ್ಮ ಪಕ್ಷಕ್ಕೆ ಲಾಭ ಇದ್ದೇ ಇದೆ. ಬಿಎಸ್‌ವೈ ಸಿಎಂ ಆಗಿ ಮುಂದುವರೆದರೂ ಲಾಭ ಇದೆ. ಸಿಎಂ ಸ್ಥಾನದಿಂದ ಕೆಳಗಿಳಿದರೂ ಕಾಂಗ್ರೆಸ್‌ಗೆ ಲಾಭ ವಿದೆ ಎಂದರು.

ಸರ್ಕಾರ ಪತನವಾದರೆ ನೇರವಾಗಿ ಚುನಾವಣೆಗೆ ಹೋಗೋದೊಂದೇ ಗುರಿ. ಸುಮಾರು 6 ತಿಂಗಳಿಂದ ಸಿಎಂ ಬದಲಾವಣೆ ಚರ್ಚೆ ನಡೀತಿದೆ. ಬಹಳಷ್ಟು ಶಾಸಕರು ಸಹ ಸಿಎಂ ಬದಲಾವಣೆ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಬಹುಶಃ ಆ ಕಾಲ ಈಗ ಕೂಡಿ ಬಂದಿದೆ ಅನ್ನಿಸುತ್ತಿದೆ. ಏನೇ ಇದ್ದರೂ ಅದು ಬಿಜೆಪಿಯ ಆಂತರಿಕ ವಿಚಾರ. ಯಾರು ಸಿಎಂ ಆಗ್ತಾರೋ ಬಿಡ್ತಾರೋ ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಹೊಸ ಮುಖ್ಯಮಂತ್ರಿ ಮಾಡೋದು ಕೂಡ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.

Last Updated : Jun 6, 2021, 2:31 PM IST

ABOUT THE AUTHOR

...view details