ತಮಿಳುನಾಡು:ಶಶಿಕಲಾ ಎಐಎಡಿಎಂಕೆ ಪಕ್ಷದ ಭಾಗವಲ್ಲ. ಜಯಲಲಿತಾ ಅವರ ಆತ್ಮದ ಸಂತೋಷಕ್ಕಾದರೂ ಅವಳು ಪಕ್ಷದಿಂದ ದೂರವಿರಬೇಕು ಎಂದು ಎಐಎಡಿಎಂಕೆ ಸಹ ಕನ್ವೀನರ್ ಕೆ.ಪಿ ಮುನುಸ್ವಾಮಿ ಹೇಳಿದ್ದಾರೆ. ಶಶಿಕಲಾ ಎಐಎಡಿಎಂಕೆ ಜೊತೆ ಇಲ್ಲ. ಆಕೆಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಪರ್ಕವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಶಶಿಕಲಾ ಅವರ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಮುನುಸ್ವಾಮಿ ಈ ಹೇಳಿಕೆ ನೀಡಿದ್ದಾರೆ. ಆಡಿಯೋದಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಶಶಿಕಲಾ ಮಾತನಾಡುತ್ತಿದ್ದು, ಕೊರೊನಾ ಕೊನೆಗೊಂಡ ನಂತರ ತಾನು ಮತ್ತೆ ಪಕ್ಷದ ಕೆಲಸಕ್ಕೆ ಬರುತ್ತೇನೆ ಎಂದು ಹೇಳಿಕೊಂಡಿದ್ದಾಳೆ.