ಕರ್ನಾಟಕ

karnataka

ETV Bharat / bharat

ಜಮ್ಮು-ಕಾಶ್ಮೀರ: ಉಗ್ರರ ಗುಂಡಿಗೆ ಬಲಿಯಾದ ಬಿಜೆಪಿ ಸರಪಂಚ್‌ - ಸರಪಂಚ್​​ನ ಮೇಲೆ ಉಗ್ರರ ದಾಳಿ

ಕಣಿವೆ ನಾಡಿನಲ್ಲಿ ಮತ್ತೆ ಬಾಲಬಿಚ್ಚಿರುವ ಉಗ್ರರು ಬಿಜೆಪಿ ಸರಪಂಚ್​ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆ ಮಾಡಿದ್ದಾರೆ.

Sarpanch shot dead in north Kashmir Baramulla
Sarpanch shot dead in north Kashmir Baramulla

By

Published : Apr 15, 2022, 8:22 PM IST

ಬಾರಾಮುಲ್ಲಾ(ಜಮ್ಮು-ಕಾಶ್ಮೀರ):ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಸರಪಂಚ್‌ (ಸ್ಥಳೀಯ ಪಂಚಾಯಿತಿ ಮುಖಂಡ) ಮೇಲೆ ಭಯೋತ್ಪಾದಕರು ಗಂಡಿನ ದಾಳಿ ನಡೆಸಿದ್ದಾರೆ. ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮುಖಂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

ನಿನ್ನೆಯಷ್ಟೇ ನಾಲ್ವರು ಉಗ್ರರನ್ನು ಹೆಡೆಮುರಿ ಕಟ್ಟುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಬಾಲಬಿಚ್ಚಿರುವ ಉಗ್ರರು ಬಾರಾಮುಲ್ಲಾ ಜಿಲ್ಲೆಯ ಗೋಷ್​ಬುಗ್ ಪಟ್ಟಣದ ಸರಪಂಚ್​ ಮಂಜೂರ್​ ಅಹ್ಮದ್ ಬಂಗ್ರೂ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಆತ ಸಾವನ್ನಪ್ಪಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಈಗಾಗಲೇ ಭದ್ರತಾ ಪಡೆ ಲಗ್ಗೆ ಹಾಕಿದ್ದು, ಉಗ್ರರಿಗೋಸ್ಕರ ಶೋಧಕಾರ್ಯ ಆರಂಭ ಮಾಡಿದೆ.

ಇದನ್ನೂ ಓದಿ:'ಭಾರತಕ್ಕೆ ಹಾನಿಯಾದರೆ ಯಾರನ್ನೂ ಬಿಡೆವು': ಅಮೆರಿಕದಲ್ಲಿ ನಿಂತು ರಾಜನಾಥ್‌ ಸಿಂಗ್ ಎಚ್ಚರಿಕೆ

ಶ್ರೀನಗರದ ಖಾಖ್​ಮೋಹ್​ ಪ್ರದೇಶದಲ್ಲಿ ಕಳೆದ ಕೆಲ ದಿನಗಳ ಹಿಂದೆ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿ, ಓರ್ವ ಸರಪಂಚ್​​ನನ್ನು ಹತ್ಯೆ ಮಾಡಿದ್ದರು. ಇದಾದ ಬಳಿಕ ಕುಲ್ಗಾಮ್ ಜಿಲ್ಲೆಯಲ್ಲೂ ಓರ್ವ ಸರಪಂಚ್​ನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ABOUT THE AUTHOR

...view details