ಮಹೆಬೂಬನಗರ(ತೆಲಂಗಾಣ):ಅಧಿಕಾರದ ದರ್ಪ ಮನುಷ್ಯನನ್ನು ಏನು ಬೇಕಾದರೂ ಮಾಡಿಸುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತಮ್ಮ ಉದ್ಯೋಗದ ಬಗ್ಗೆ ಮಾಹಿತಿ ನೀಡಲು ಆರ್ಟಿಐ ಸಲ್ಲಿಸಿದ್ದ ವಿಶೇಷಚೇತನ ವ್ಯಕ್ತಿಯ ಮೇಲೆ ಗ್ರಾಮ ಪಂಚಾಯಿತಿ ಸರಪಂಚ್ ಹಲ್ಲೆ ನಡೆಸಿದ್ದಲ್ಲದೇ, ಒದ್ದು ದೌರ್ಜನ್ಯ ಮೆರೆದಿದ್ದಾರೆ.
ಮಹೆಬೂಬನಗರ ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ವಿಶೇಷಚೇತನನನ್ನು ಸರಪಂಚ್ ಕಾಲಿನಿಂದ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಘಟನೆ ಬೆಳಕಿಗೆ ಬಂದ ತಕ್ಷಣ ಜಿಲ್ಲಾಧಿಕಾರಿ ಅವರು ದುರುಳ ಸರಪಂಚ್ನನ್ನು ಅವರ ಸ್ಥಾನದಿಂದ ವಜಾಗೊಳಿಸಿ ಆದೇಶಿಸಿದ್ದು, ದೂರು ಆಧರಿಸಿ ಬಂಧಿಸಲಾಗಿದೆ.
ಏನಾಯ್ತು?:ಮೆಹಬೂಬನಗರ ಜಿಲ್ಲೆಯ ಗ್ರಾಮವೊಂದರ ವಿಶೇಷಚೇತನ ವ್ಯಕ್ತಿಯೊಬ್ಬ ತಮ್ಮ ಉದ್ಯೋಗದ ಬಗ್ಗೆ ಮಾಹಿತಿ ಕೇಳಿ ಮಾಹಿತಿ ಹಕ್ಕು ಕಾಯ್ದೆಯಡಿ(ಆರ್ಟಿಐ) ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಗೋಲ್ಮಾಲ್ ನಡೆಸಿರುವ ಆರೋಪ ಹೊತ್ತಿರುವ ಸರಪಂಚ್ ಆ ವಿಶೇಷಚೇತನ ವ್ಯಕ್ತಿಯನ್ನು ಕುಟುಂಬಸ್ಥರ ಮುಂದೆಯೇ ನಿಂದಿಸಿ, ಒಯುವ ಮೂಲಕ ದರ್ಪ ತೋರಿದ್ದಾರೆ.