ಸರನ್(ಬಿಹಾರ): ಅದೃಷ್ಟ ಯಾರಿಗೆ, ಯಾವಾಗ, ಎಲ್ಲಿ, ಹೇಗೆ ಒಲಿಯುತ್ತದೆ ಎಂದು ಹೇಳಲು ಊಹಿಸುವುದು ಅಸಾಧ್ಯ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಿಹಾರ್ ಮೂಲದ ವ್ಯಕ್ತಿ ಈಗ ಕೋಟ್ಯಾಧಿಪತಿ ಆಗಿದ್ದಾರೆ. ಅದು ಕ್ರಿಕೆಟ್ ಆ್ಯಪ್ ಡ್ರೀಮ್ 11 ಆಡುವ ಮೂಲಕ ಅನ್ನೋದು ವಿಶೇಷ.
ಬಿಹಾರದ ಸರನ್ ಜಿಲ್ಲೆಯ ರಮೇಶ್ ತಮ್ಮ ಮೊಬೈಲ್ ಗೇಮ್ ಅಪ್ಲಿಕೇಶನ್ ಡ್ರೀಮ್ 11ನಲ್ಲಿ ತಮ್ಮ ಐಪಿಎಲ್ ತಂಡವನ್ನು ರಚಿಸಿದ್ದರು. ಅವರು ರಚಿಸಿದ್ದ ತಂಡವು ಮೊದಲನೇ ಸ್ಥಾನ ಪಡೆದಿದೆ. ಈ ಮೂಲಕ ರಮೇಶ್ ಎರಡು ಕೋಟಿ ರೂಪಾಯಿ ಮೊತ್ತವನ್ನು ಗೆದ್ದಿದ್ದಾರೆ. ನೋಟುಗಳ ಸುರಿಮಳೆಯ ನಂತರ ರಸುಲ್‌ಪುರ ಗ್ರಾಮದ ನಿವಾಸಿ ರಮೇಶ್ ಕುಮಾರ್ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ಡ್ರೀಮ್ 11 ನಲ್ಲಿ 2 ಕೋಟಿ ಗೆದ್ದ ರಮೇಶ್ ಕುಮಾರ್: ಡ್ರೀಮ್ 11 ವಿಜೇತ ರಮೇಶ್ ಕುಮಾರ್ ಪಶ್ಚಿಮ ಬಂಗಾಳದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದು ದಿನ ಐಪಿಎಲ್ ಪಂದ್ಯ ವೀಕ್ಷಿಸುವಾಗ ನಾನು Dream11 ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದೇನೆ. ನಾನು ನನ್ನ ಬಿಡುವಿನ ವೇಳೆಯಲ್ಲಿ Dream11 ಅನ್ನು ಆಡಲು ಪ್ರಾರಂಭಿಸಿದೆ. ಆರಂಭದಲ್ಲಿ 49 ರೂಪಾಯಿ ಹಾಕಿದೆ. ಕೆಲವೊಮ್ಮೆ ಗೆದ್ದರೆ, ಕೆಲವೊಮ್ಮೆ ನಿರಾಸೆಯಾಗುತ್ತಿತ್ತು. ಇತ್ತೀಚೆಗೆ ಪಂಜಾಬ್ ಮತ್ತು ಲಖನೌ ನಡುವೆ ನಡೆದ ಪಂದ್ಯದ ಸಮಯದಲ್ಲಿ ನಾನು ಟೀಮ್ವೊಂದನ್ನು ರಚಿಸಿದ್ದೆ. ಇದರಲ್ಲಿ ವೇಗದ ಬೌಲರ್ ಕಗಿಸೊ ರಬಾಡ ನಾಯಕನಾಗಿ ಮತ್ತು ಉಪನಾಯಕ ಶಿಖರ್ ಧವನ್ನನ್ನು ಆಯ್ಕೆ ಮಾಡಿದ್ದೆ ಎಂದರು.