ನವದೆಹಲಿ: ಶಾರದಾ ಚಿಟ್ ಫಂಡ್ ಹಗರಣ ಸಂಬಂಧ ಸಿಬಿಐ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆಗಿಳಿದಿದ್ದು, ದೆಹಲಿಯ ಹಲವೆಡೆ ಶೋಧಕಾರ್ಯಕ್ಕೆ ಮುಂದಾಗಿದ್ದಾರೆ.
ಈ ಹಗರಣ ಸಂಬಂಧ ಸ್ಕೀಮ್ ಆಪರೇಟರ್ಗಳ ರಕ್ಷಿಸುವಲ್ಲಿ ಸೆಕ್ಯೂರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಪಾತ್ರ ಇರುವ ಆರೋಪದಡಿ ಮೂರು ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಶಾರದಾ ಗ್ರೂಪ್ ವಿರುದ್ಧ ಅನೇಕ ಎಫ್ಐಆರ್ಗಳು ದಾಖಲಾಗಿವೆ. ಇದರಲ್ಲಿ ಕಂಪನಿಯ ಅಧಿಕಾರಿಗಳು ಮತ್ತು ಅವರ ಸಹವರ್ತಿಗಳು ತಮ್ಮ ಠೇವಣಿ ಹಣ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ
ಶಾರದಾ ಚಿಟ್ ಫಂಡ್ ಹಗರಣದ ತನಿಖೆಯನ್ನು ಸುಪ್ರೀಂಕೋರ್ಟ್ ಸಿಬಿಐಗೆ ಹಸ್ತಾಂತರಿಸಿದೆ ಮತ್ತು ಈ ಬಗ್ಗೆ ತನಿಖೆ ನಡೆಸುತ್ತಿರುವ ಏಜೆನ್ಸಿ ತಂಡಕ್ಕೆ ಎಲ್ಲ ವ್ಯವಸ್ಥಾಪನಾ ಸಹಾಯವನ್ನು ನೀಡುವಂತೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಇದನ್ನೂ ಓದಿ:ಭಾರತವನ್ನು 200 ವರ್ಷ ಆಳಿದ್ದು ಅಮೆರಿಕ: ಬಿಜಿಪಿ ಮುಖ್ಯಮಂತ್ರಿ ಅಚ್ಚರಿ ಹೇಳಿಕೆ