ಭಿಖಿವಿಂದ್ (ಪಂಜಾಬ್): 1991ರಲ್ಲಿ ಪಾಕಿಸ್ತಾನದ ನ್ಯಾಯಾಲಯದಿಂದ 'ಗೂಢಚಾರಿಕೆ'ಗಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿ 2013ರಲ್ಲಿ ಲಾಹೋರ್ನಲ್ಲಿ ನಿಧನ ಹೊಂದಿದ್ದ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಶನಿವಾರ ರಾತ್ರಿ ತಮ್ಮ ಹಳ್ಳಿ ಭಿಖಿವಿಂದ್ನಲ್ಲಿ ಕೊನೆಯುಸಿರೆಳೆದರು.
ರಾಜ್ಯದ ಭಿಖಿವಿಂಡ್ ಪಟ್ಟಣದ ರೈತ ಸರಬ್ಜಿತ್ ಸಿಂಗ್, ಭಾರತ-ಪಾಕಿಸ್ತಾನ ಗಡಿಯ ಬಳಿ ವಾಸಿಸುತ್ತಿದ್ದರು. ಮದ್ಯ ಸೇವಿಸಿದ್ದ ಸಿಂಗ್ ದಾರಿತಪ್ಪಿ ಗಡಿರೇಖೆ ದಾಟಿದ್ದರು. ಹಾಗಾಗಿ 1991ರಲ್ಲಿ ಪಾಕಿಸ್ತಾನದ ನ್ಯಾಯಾಲಯ ಅವರಿಗೆ ಮರಣದಂಡನೆ ವಿಧಿಸಿತ್ತು. ಸಿಂಗ್ ಅವರನ್ನು 22 ವರ್ಷಗಳ ಕಾಲ ಲಾಹೋರ್‌ನ ಕೋಟ್ ಲಖ್‌ಪತ್ ಜೈಲಿನಲ್ಲಿ ಇರಿಸಲಾಗಿತ್ತು.