ಕರ್ನಾಟಕ

karnataka

ETV Bharat / bharat

ಹಿಜಾಬ್​ಗೆ ವಿರೋಧ ವ್ಯಕ್ತಪಡಿಸಿದ ಇರಾನಿನ್ ಚೆಸ್​​ ಆಟಗಾರ್ತಿ! - ಈಟಿವಿ ಭಾರತ ಕನ್ನಡ

ಇರಾನಿನ ಅಂತಾರಾಷ್ಟ್ರೀಯ ಮಹಿಳಾ ಚೆಸ್​ ಆಟಗಾರ್ತಿ ಕಜಕಿಸ್ತಾನದಲ್ಲಿ ನಡೆಯುತ್ತಿರುವ ಚೆಸ್​ ಪಂದ್ಯದಲ್ಲಿ ಹಿಜಾಬ್​ ಧರಿಸದೇ ಭಾಗವಹಿಸುವ ಮೂಲಕ ಹಿಜಾಬ್​ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Hijab Controversy
ಹಿಜಾಬ್​ಗೆ ವಿರೋಧ ವ್ಯಕ್ತಪಡಿಸಿದ ಸಾರಾ ಖದೇಮ್

By

Published : Dec 28, 2022, 4:51 PM IST

ನವದೆಹಲಿ: ಇರಾನ್​ನ ಮಹಿಳಾ ಚೆಸ್​ ಆಟಗಾರ್ತಿ​ ಅಂತಾರಾಷ್ಟ್ರೀಯ ಚೆಸ್​ ಟೂರ್ನಮೆಂಟ್​ನಲ್ಲಿ ಹಿಜಾಬ್​ ಧರಿಸಿದೇ ಭಾಗವಹಿಸುವ ಮೂಲಕ ಹಿಜಾಬ್​ ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ಬೆಂಬಲ ಸೂಚಿಸಿದ್ದಾರೆ.

ಅಂತಾರಾಷ್ಟ್ರೀಯ ಚೆಸ್​ ಆಟಗಾರ್ತಿ ಸಾರಾ ಖದೇಮ್​ ಅವರು ಕಜಕಿಸ್ತಾನದ ಅಲ್ಮಾಟಿಯಲ್ಲಿ ನಡೆಯುತ್ತಿರುವ FIDE ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ತಲೆಗೆ ಸ್ಕಾರ್ಫ್​ ಮತ್ತು ಹಿಜಾಬ್​ ಧರಿಸಿದೇ ಭಾಗವಹಿಸಿ ಪಂದ್ಯವನ್ನು ಆಡುವ ಮೂಲಕ ಹಿಜಾಬ್​ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಇರಾನ್​ ಮಹಿಳೆಯರು ದೇಶ ಮತ್ತು ವಿದೇಶಗಳಲ್ಲಿ ನಡೆಯುವ ಯಾವುದೇ ಪಂದ್ಯಗಳಲ್ಲಿ ಭಾಗವಹಿಸಿದರೂ ಆ ಸಮಯದಲ್ಲಿ ಹಿಜಾಬ್​ ಧರಿಸುವುದನ್ನು ಅಲ್ಲಿಯ ಸರ್ಕಾರ ಕಡ್ಡಾಯಗೊಳಿಸಿದೆ.

ಆದರೇ ಸೆಪ್ಟೆಂಬರ್​ ತಿಂಗಳಿನಲ್ಲಿ ಇರಾನ್​ನಲ್ಲಿ ಹಿಜಾಬ್​ ವಿರೋಧಿಸಿ, ಮಹಿಳೆಯರು ರಸ್ತೆಗಿಳಿದು ಪ್ರತಿಭಟನೆಗಳನ್ನು ಪ್ರಾರಂಭಿಸಿದರು. ಇದಕ್ಕೆ ಬೆಂಬಲವಾಗಿ ಮಹಿಳಾ ಕ್ರೀಡಾಪಟುಗಳು ಹಿಜಾಬ್​ ವಿರೋಧಿಗೆ ಸಾತ್​ ನೀಡುತಿದ್ದಾರೆ. ಇನ್ನು ಸಾರಾ ಅವರು ಹಿಜಾಬ್​ ಧರಿಸದೇ ಪಂದ್ಯದಲ್ಲಿ ಭಾಗವಹಿಸಿರುವ ಫೋಟೋವನ್ನು ಅಂತಾರಾಷ್ಟೀಯ ಚೆಸ್​ ಒಕ್ಕೂಟ ಪೋಸ್ಟ್​ ಮಾಡಿದೆ. ಪ್ರಸ್ತುತ ಸಾರಾ ಅವರು ವಿಶ್ವ ಚೆಸ್ ಶ್ರೇಯಾಂಕದಲ್ಲಿ 804ನೇ ಸ್ಥಾನದಲ್ಲಿದ್ದಾರೆ.

ಇದಕ್ಕೂ ಮೊದಲು ಅಕ್ಟೋಬರ್​ ತಿಂಗಳಿನಲ್ಲಿ ಇರಾನಿನ ಪರ್ವತಾರೋಹಿ ಎಲ್ನಾಜ್ ರೆಕಾಬಿ ಎಂಬುವವರು ದಕ್ಷಿಣ ಕೊರಿಯಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಹೆಡ್​ ಸ್ಕಾರ್ಫ್​ ಧರಿಸದೇ ಭಾಗವಹಿಸಿದ್ದರು. ಬಳಿಕ ಈ ಬಗ್ಗೆ ಅವರಿಗೆ ಪ್ರಶ್ನಿಸಿದಾಗ ಉದ್ದೇಶ ಪೂರ್ವಕವಾಗಿಯೇ ಹಾಗೆ ಮಾಡಿದ್ದೇನೆ ಎಂಬ ಹೇಳಿಕೆ ನೀಡಿದ್ದರು. ಅಲ್ಲದೇ ಇರಾನ್‌ನ ಫುಟ್ಬಾಲ್​ ತಂಡ ಇತ್ತೀಚೆಗೆ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ದೇಶದ ರಾಷ್ಟ್ರಗೀತೆ ಹಾಡದೇ ಮೌನವಾಗಿರುವ ಮೂಲಕ ಹಿಜಾಬ್​ಗೆ ವಿರೋಧಿಸಿತ್ತು.

ಹಿಜಾಬ್ ಚಳವಳಿ ಎಂದರೇನು:ಇರಾನ್‌ನಲ್ಲಿ, 22 ವರ್ಷದ ಕುರ್ದಿಶ್ ಹುಡುಗಿ ಮಹ್ಸಾ ಅಮಿನಿ ಎಂಬುವವರು ಡ್ರೆಸ್ ಕೋಡ್ ಉಲ್ಲಂಘಿಸಿದ್ದಾರೆ ಎಂದು ಬಂಧಿಸಲಾಗಿತ್ತು. ಬಳಿಕ ಪೊಲೀಸ್ ಕಸ್ಟಡಿಯಲ್ಲಿ ನಿಗೂಡವಾಗಿ ಅವರು ಸಾವನ್ನಪ್ಪಿದರು. ಇದರಿಂದ ಆಕ್ರೋಶಗೊಂಡ ಮಹಿಳೆಯರು ದೇಶಾದ್ಯಂತ ರಸ್ತೆಗಿಳಿದು ಸರ್ಕಾರದ ವಿರುದ್ಧ ಪ್ರತಭಟಿಸಿ ಹಿಜಾಬ್​ ಚಳವಳಿ ಆರಂಭಿಸಿದ್ದರು. ಇಂದಿಗೂ ಇರಾನ್​ನಲ್ಲಿ ಹಿಜಾಬ್​ ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸುತಿದ್ದಾರೆ.

ಇದನ್ನೂ ಓದಿ:ಇರಾನ್‌ನ ಹಿಜಾಬ್ ವಿರೋಧಿ ಪ್ರತಿಭಟನೆಗೆ ಕೋಯಿಕ್ಕೋಡ್​ನಲ್ಲಿ ಸಾತ್​..

ABOUT THE AUTHOR

...view details