ಪುಣೆ (ಮಹಾರಾಷ್ಟ್ರ) :ಪಂಜಾಬ್ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾದ ಶಂಕಿತ ಆರೋಪಿ ಸಂತೋಷ್ ಜಾಧವ್ ಗ್ಯಾಂಗ್ನ ಏಳು ಜನ ಸದಸ್ಯರನ್ನು ಮಹಾರಾಷ್ಟ್ರದ ಪುಣೆಯ ಪೊಲೀಸರು ಬಂಧಿಸಿದ್ದಾರೆ.
ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಪುಣೆ ಪೊಲೀಸರು ಶಾರ್ಪ್ ಶೂಟರ್ ಆಗಿರುವ ಸಂತೋಷ್ ಜಾಧವ್ನನ್ನು ಬಂಧಿಸಿದ್ದರು. ಅಂದಿನಿಂದ ಈತನ ಗ್ಯಾಂಗ್ನ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಇದೀಗ ಸುಲಿಗೆ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ, ಬಂಧಿತರಿಂದ 13 ಪಿಸ್ತೂಲ್‌ಗಳು, 8 ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಾರ್ಪ್ ಶೂಟರ್ ಸಂತೋಷ್ ಜಾಧವ್ ಗ್ಯಾಂಗ್ನ 7 ಸದಸ್ಯರ ಬಂಧನ, 13 ಪಿಸ್ತೂಲ್ ವಶಕ್ಕೆ ಬಂಧಿತರನ್ನು ಜೀವನ್‌ಸಿಂಗ್ ನಹರ್, ಶ್ರೀರಾಮ್ ಥೋರಟ್, ಜಯೇಶ್ ಬಹಿರಾಮ್, ವೈಭವ್ ಅಲಿಯಾಸ್ ಭೋಲಾ ತಿಟ್ಕರೆ, ರೋಹಿತ್ ಟಿಟ್ಕರೆ, ಸಚಿನ್ ಟಿಟ್ಕರೆ, ಜೀಶನ್ ಮುಂಡೆ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಧೈರ್ಯಶಾಲಿ ಬಾಲೆ : ಬಲಾತ್ಕಾರಕ್ಕೆ ಯತ್ನಿಸಿದ ಕಾಮುಕನನ್ನ ಹಿಮ್ಮೆಟ್ಟಿಸಿದ ಎಂಟು ವರ್ಷದ ಬಾಲಕಿ!