ಕರ್ನಾಟಕ

karnataka

ETV Bharat / bharat

ಸಂತೂರ್ ಮಾಂತ್ರಿಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ಭಜನ್ ಸೊಪೋರಿ ನಿಧನ - ಸಂತೂರ್ ಮಾಂತ್ರಿಕ ಪಂಡಿತ್ ಭಜನ್ ಸೊಪೋರಿ ಇನ್ನಿಲ್ಲ

ಮೂಲತಃ ಕಾಶ್ಮೀರದ ಸೊಪೋರಿ ಕಣಿವೆ ಅವರಾಗಿದ್ದ ಪಂಡಿತ್ ಭಜನ್ ಸೊಪೋರಿ, ತಮ್ಮ ಐದನೇ ವರ್ಷದ ವಯಸ್ಸಿನಲ್ಲೇ ಮೊದಲ ಪ್ರರ್ದಶನ ನೀಡಿದ್ದರು.

Santoor maestro Pandit Bhajan Sopori passes away
ಸಂತೂರ್ ಮಾಂತ್ರಿಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ಭಜನ್ ಸೊಪೋರಿ ನಿಧನ

By

Published : Jun 2, 2022, 7:24 PM IST

ನವದೆಹಲಿ: ಖ್ಯಾತ ಸಂತೂರ್ ಮಾಂತ್ರಿಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ಭಜನ್ ಸೊಪೋರಿ (74) ಗುರುವಾರ ನಿಧನರಾಗಿದ್ದಾರೆ. ಗುರುಗ್ರಾಮ್​​ನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

1948ರಲ್ಲಿ ಜನಿಸಿದ್ದ ಭಜನ್​ ಮೂಲತಃ ಕಾಶ್ಮೀರದ ಸೊಪೋರಿ ಕಣಿವೆ ಅವರಾಗಿದ್ದು, ಭಾರತೀಯ ಶಾಸ್ತ್ರೀಯ ಸಂಗೀತದ ಸೂಫಿಯಾನ ಘರಾಣೆ ಪರಂಪರೆಗೆ ಸೇರಿದ್ದರು. 1953ರಲ್ಲಿ ತಮ್ಮ ಐದನೇ ವರ್ಷದ ವಯಸ್ಸಿನಲ್ಲೇ ಮೊದಲ ಪ್ರರ್ದಶನವನ್ನು ನೀಡಿದ್ದರು.

ದಶಕಗಳ ಕಾಲ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಪಂಡಿತ್​ ಭಜನ್​, ಈಜಿಪ್ಟ್, ಇಂಗ್ಲೆಂಡ್, ಜರ್ಮನಿ ಮತ್ತು ಅಮೆರಿಕದಲ್ಲೂ ತಮ್ಮ ಕಛೇರಿ ನಡೆಸಿದ್ದರು. ಅಜ್ಜ ಎಸ್.​ಸಿ.ಸೊಪೋರಿ ಮತ್ತು ತಂದೆ ಶಂಭೂನಾಥ್ ಅವರಿಂದ ಹಿಂದೂಸ್ತಾನಿ ಸಂಗೀತ ಕಲಿತಿದ್ದ ಅವರು, ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದರು.

1992ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2004ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2016ರಲ್ಲಿ ಜಮ್ಮು ಮತ್ತು ಕಾಶ್ಮೀರದ ಜೀವಮಾನ ಸಾಧನೆ ಪ್ರಶಸ್ತಿಗೆ ಪಂಡಿತ್ ಭಜನ್ ಪಾತ್ರರಾಗಿದ್ದರು.

ಇದನ್ನೂ ಓದಿ:ನನ್ನ‌ ಹೆಸರು ಬಳಸಿಕೊಂಡು ಹಣ ಕೇಳಿದರೆ ಕೊಡಬೇಡಿ: ಚಂದ್ರಶೇಖರ ಕಂಬಾರ

For All Latest Updates

TAGGED:

ABOUT THE AUTHOR

...view details