ಮುಂಬೈ:ಕಳೆದ ವಾರ ಇಡಿ ನೋಟಿಸ್ ನೀಡಿದರೂ ತಮಗೆ ಬೇರೆ ಕೆಲಸ ಇದೆ ಎಂದು ನುಣಿಚಿಕೊಂಡಿದ್ದ ಶಿವಸೇನಾ ನಾಯಕ ಸಂಜಯ್ ರಾವುತ್ಗೆ ಇಡಿ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಜಯ್ ರಾವುತ್ ಇಡಿ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಂಜಯ್ ರಾವುತ್ ಇಂದು ಮಧ್ಯಾಹ್ನ ಇಡಿ ಕಚೇರಿಗೆ ಹಾಜರಾಗಲಿದ್ದೇನೆ ಎಂದು ಹೇಳಿದ್ದಾರೆ. ಹೊಸ ಸರ್ಕಾರ ರಚನೆಯಾದ ನಂತರ ಸಂಜಯ್ ರಾವುತ್ ಇಡಿ ಕಚೇರಿಗೆ ಭೇಟಿ ನೀಡಲಿದ್ದು,ವಿಚಾರಣೆ ಎದುರಿಸಲಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಇಡಿ ಮುಂದೆ ಹಾಜರಾಗುವುದಾಗಿ ಸಂಜಯ್ ರಾವುತ್ ಟ್ವೀಟ್ ಮಾಡಿದ್ದಾರೆ. ತನಗೆ ನೀಡಿರುವ ಸಮನ್ಸ್ ಗೌರವಿಸುತ್ತೇನೆ. ತನಿಖಾ ಸಂಸ್ಥೆಗಳಿಗೆ ಸಹಕಾರ ನೀಡುವುದು ತಮ್ಮ ಆದ್ಯ ಕರ್ತವ್ಯ. ಇಡಿ ಕಚೇರಿ ಬಳಿ ಯಾರೂ ಜಮಾಯಿಸದಂತೆ ಇದೇ ವೇಳೆ ಟ್ವೀಟ್ ಮೂಲಕ ಸಂಜಯ್ ರಾವತ್ ಪಕ್ಷದ ಕಾರ್ಯಕರ್ತರಿಗೆ ಮನವಿ ಕೂಡಾ ಮಾಡಿದ್ದಾರೆ.
ಪಕ್ಷಕ್ಕಾಗಿ ಕೆಲಸ ಮಾಡದಂತೆ ಒತ್ತಡ:ಗುರವಾರಮಾಧ್ಯಮಗಳ ಜತೆ ಮಾತನಾಡಿದಸಂಜಯ್ ರಾವತ್, ಇಡಿ ನೋಟಿಸ್ ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ, ಪಕ್ಷದ ಕೆಲಸದಿಂದ ಸ್ವಲ್ಪ ಬಿಡುವು ಸಿಕ್ಕಿದೆ ಎಂದು ಹೇಳಿದರು. ಹೀಗಾಗಿ ತಾವು ನಾಳೆ ಇಡಿ ವಿಚಾರಣೆಗೆ ತೆರಳಲಿದ್ದೇನೆ. ಏನೇ ಕ್ರಮ ಕೈಗೊಂಡರೂ ಎದುರಿಸುತ್ತೇನೆ ಎಂದಿರುವ ಮಾಜಿ ಸಿಎಂ ಉದ್ದವ್ ಠಾಕ್ರೆ ಆಪ್ತ, ಪಕ್ಷದ ಕೆಲಸ ಮಾಡದಂತೆ ನನ್ನ ಮೇಲೆ ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಸರ್ಕಾರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಭೂ ಹಗರಣದಲ್ಲಿ ಸಿಲುಕಿರುವ ರಾವತ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಇದೆ. ಈಗಾಗಲೇ ಸಂಜಯ್ ರಾವತ್ ಅವರ ಆಪ್ತನ ಬಂಧನವಾಗಿದೆ. ಅಷ್ಟೇ ಅಲ್ಲ ಇದೇ ಪ್ರಕರಣದಲ್ಲಿ ಅವರ ಪತ್ನಿಯ ಆಸ್ತಿಯನ್ನ ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಮೊದಲು ಜೂನ್ 28 ರಂದು ಸಂಜಯ್ ರಾವತ್ ಅವರಿಗೆ ವಿಚಾರಣೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿತ್ತು.
ಇದನ್ನು ಓದಿ:ಗರ್ಭದಲ್ಲಿದ್ದಾಗ ಮಗು ದತ್ತು ತೆಗೆದುಕೊಳ್ಳುವಂತಿಲ್ಲ: ಕೋರ್ಟ್ ಮಹತ್ವದ ತೀರ್ಪು