ಮುಂಬೈ :ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ)ವನ್ನು 'ನಾಯಿಗಳು' ಎಂದು ಕರೆದಿದ್ದಾರೆ.
ಅಕ್ರಮ ಹಣ ಗಳಿಕೆ ಹಾಗೂ ಆದಾಯಕ್ಕಿಂತ ಜಾಸ್ತಿ ಆಸ್ತಿ ಮಾಡಿದವರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ತಂಡವು ಇತ್ತೀಚೆಗೆ ದಾಳಿ ಮಾಡುವಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದು, ಇದನ್ನು ಖಂಡಿಸಿ ಸಂಜಯ್ ರಾವತ್, ಕೇಂದ್ರದ ಇವೆರಡೂ ತನಿಖಾ ಸಂಸ್ಥೆಗಳು 'ನಾಯಿಗಳು' ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 'ನಂಗೆ ವೋಟು, ನಿಂಗೆ ವ್ಯಾಕ್ಸಿನು': ಬಿಜೆಪಿಯ ಕೊರೊನಾ ಲಸಿಕೆ ಭರವಸೆಗೆ ರಾವತ್ ವ್ಯಂಗ್ಯ
ಮಂದಿನ ಬಾರಿ ಯಾರ ಮನೆಗೆ ದಾಳಿ ಮಾಡಲಿವೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ನಿಮ್ಮ ದಾಳಿಯನ್ನು ಇಷ್ಟಕ್ಕೆ ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಈ ಆಕ್ರೋಶ ಭರಿತ ಟ್ವೀಟ್ ಇದೀಗ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಶಿವಸೇನಾ ಮುಖಂಡ ಪ್ರತಾಪ್ ಸರ್ನಾಯಕ್ ಅವರಿಗೆ ಸೇರಿದ ಕಚೇರಿ ಮತ್ತು ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ)ವು ಇತ್ತೀಚೆಗೆ ದಾಳಿ ನಡೆಸಿತ್ತು. ಇದಕ್ಕೂ ಮುನ್ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್ ಅವರ ಮಗ ವಿಹಾಂಗ್ ಸರ್ನಾಯಕ್ನನ್ನು ಇದೇ ಪ್ರಕರಣ ಸಂಬಧ ಬಂಧಿಸಲಾಗಿತ್ತು.