ಮುಂಬೈ: ಶಿವಸೇನಾ ನಾಯಕ ಸಂಜಯ್ ರಾವುತ್ ಜಾಮೀನಿಗೆ ತಡೆ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಪತ್ರಾ ಚಾಲ್ ಹಗರಣ ಪ್ರಕರಣದಲ್ಲಿ ಶಿವಸೇನಾ ನಾಯಕ ಮತ್ತು ರಾಜ್ಯ ಸಭಾ ಸಂಸದ ಸಂಜಯ್ ರಾವುತ್ ಅವರಿಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೇ ರಾವುತ್ಗೆ ಜಾಮೀನು ನೀಡದಂತೆ ಆಗ್ರಹಿಸಿ ಜಾರಿ ನಿರ್ದೆಶನಾಲಯ ಹೈಕೋರ್ಟ್ಗೆ ಜಾಮೀನು ತಡೆ ಅರ್ಜಿಯನ್ನು ಸಲ್ಲಿಸಿತ್ತು. ಎರಡೂ ಕಡೆಯ ವಾದ ಆಲಿಸಿದ ಹೈಕೋರ್ಟ್ ಇಡಿ ಅರ್ಜಿಯನ್ನು ತಿರಸ್ಕರಿಸಿದೆ.