ಮುಂಬೈ :ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ದೇಶಾದ್ಯಂತ ಉಚಿತವಾಗಿ ಕೊರೊನಾ ಲಸಿಕೆ ನೀಡಿದ್ದರಿಂದ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ. ಅಂದರೆ ಉಚಿತ ವ್ಯಾಕ್ಸಿನ್ನ ಹೊರೆ ಅಂತಿಮವಾಗಿ ಜನರ ಮೇಲೆಯೇ ಬೀಳುತ್ತಿದೆ. ಹಾಗಾದರೆ, ನೀವು ಯಾರ ಹಣದಿಂದ ಉಚಿತ ವ್ಯಾಕ್ಸಿನೇಷನ್‌ಗಳನ್ನು ಪ್ರಚಾರ ಮಾಡ್ತಿದ್ದೀರಿ ಮತ್ತು ಏಕೆ? ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ತಮ್ಮ ಸಾಮ್ನಾದ ಇಂದಿನ ಲೇಖನದಲ್ಲಿ ಇಂತಹ ದೊಡ್ಡ ಪ್ರಶ್ನೆಯನ್ನು ಎತ್ತಿದ್ದಾರೆ.
ಗಾಯದ ಮೇಲೆ ಉಪ್ಪು ಸವರಬೇಡಿ :'ನಿಜವಾಗಿಯೂ ಇಂದು ಸಂಭ್ರಮಿಸುವ ವಾತಾವರಣವಿದೆಯೇ? ಇಂತಹ ಪ್ರಶ್ನೆಯನ್ನು ಮುಂದಿಟ್ಟುಕೊಂಡು ರಾವತ್ ಭಾರತೀಯ ಜನತಾ ಪಕ್ಷವನ್ನು ಕಟುವಾಗಿ ಟೀಕಿಸಿದ್ದಾರೆ. ಇಂದು, ಹಣ ದುಬ್ಬರದ ಅಬ್ಬರವು ಹಬ್ಬಗಳ ಸಂಭ್ರಮಕ್ಕೆ ಕೊಳ್ಳಿ ಇಟ್ಟಿದೆ. ಅಧಿಕಾರಿಗಳ ಉದ್ಧಟತನದ ಹೇಳಿಕೆಗಳಿಂದ ಆ ಬೆಂಕಿ ಹೆಚ್ಚಾಗಿದೆ. ಹಣ ದುಬ್ಬರವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಇದನ್ನು ಕಡಿಮೆ ಮಾಡಲು ಸಾಧ್ಯವಾಗದಿದ್ದರೆ ಗುಳೆ ಹೋಗುವ ಜನಸಾಮಾನ್ಯರ ಗಾಯದ ಮೇಲೆ ಉಪ್ಪು ಸವರಬೇಡಿ ಎಂದು ಮೋದಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
'ಜನರ ಮೇಲಿನ ಹಣದುಬ್ಬರದ ಹೊರೆಯಲ್ಲಿ ಪ್ರಧಾನಿ ಹೊಸ ನಿವಾಸ':18,000 ಕೋಟಿ ಮೌಲ್ಯದ ಖಾಸಗಿ ವಿಮಾನವನ್ನು ಪ್ರಧಾನಿಗಾಗಿ ಖರೀದಿಸುತ್ತಾರೆ. ಮತ್ತೊಂದೆಡೆ, ಸಾರ್ವಜನಿಕರು ಗ್ಯಾಸ್ ಸಿಲಿಂಡರ್ ಖರೀದಿಸಲು ಸಾಧ್ಯವಾಗದ ಕಾರಣ, ಅವರು ಸಿಲಿಂಡರ್‌ಗಳ ಬಳಕೆ ನಿಲ್ಲಿಸಿದ್ದಾರೆ. 18,000 ಕೋಟಿ ರೂ.ಗಳ ಖಾಸಗಿ ಜೆಟ್ ಖರೀದಿಗೆ ಬೆಂಕಿ ಕಡ್ಡಿ, ಖಾದ್ಯ ತೈಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಸಂಬಂಧ ಕಲ್ಪಿಸಬಾರದು.