ಕರ್ನಾಟಕ

karnataka

ETV Bharat / bharat

ಸಾಂಗ್ಲಿಯಲ್ಲಿ 9 ಜನರ ಸಾವಿನ ಪ್ರಕರಣ : ನಿಧಿಗಾಗಿ ವಿಷಪ್ರಾಶನ ಮಾಡಿದ ರಾಕ್ಷಸರು - Maharashtra police on Monday said the nine members of a family found in a mass suicide in the Sangli district

ಸಾಂಗ್ಲಿ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣವನ್ನ ಪೊಲೀಸರು ಬೇಧಿಸಿದ್ದಾರೆ. ಅದು ಸಾಮೂಹಿಕ ಕೊಲೆ ಪ್ರಕರಣವೆಂದು ತಿಳಿದು ಬಂದಿದ್ದು, ಈ ಸಂಬಂಧ ಇಬ್ಬರು ಕಿರಾತಕರನ್ನು ಪೊಲೀಸರು ಬಂಧಿಸಿದ್ದಾರೆ..

ಸಾಂಗ್ಲಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ
ಸಾಂಗ್ಲಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ

By

Published : Jun 27, 2022, 8:48 PM IST

ಮುಂಬೈ(ಮಹಾರಾಷ್ಟ್ರ): ಕಳೆದ ವಾರ ಸಾಂಗ್ಲಿ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಸಂಬಂಧ ಭಯಾನಕ ವಿಷಯವನ್ನು ಪೊಲೀಸರು ಕಂಡುಕೊಂಡಿದ್ದಾರೆ. ಒಂಬತ್ತು ಸದಸ್ಯರನ್ನು ಇಬ್ಬರು ಆರೋಪಿಗಳು ಹತ್ಯೆ ಮಾಡಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಈ ಕುಟುಂಬಕ್ಕೆ ವಿಷಪ್ರಾಶನ ಮಾಡಿಸಲಾಗಿದೆ. ಇದರಲ್ಲಿ ಮಾಂತ್ರಿಕನ ಕುಕೃತ್ಯ ಇದೆ ಎಂದು ಹೇಳಿದ್ದಾರೆ.

ಸೋಲಾಪುರದ ಸರ್ವದೇನಗರ ನಿವಾಸಿ 48 ವರ್ಷದ ಮಾಟಗಾರ ಅಬ್ಬಾಸ್ ಮೊಹಮ್ಮದ್ ಅಲಿ ಬಾಗವಾನ್ ಮತ್ತು ಆತನ ಚಾಲಕ ವಸಂತ ವಿಹಾರ್ ಧ್ಯಾನೇಶ್ವರಿಯ ನಿವಾಸಿ ಧೀರಜ್ ಚಂದ್ರಕಾಂತ್ ಸುರವ್ಶೆ (39) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಸಾವಿಗೀಡಾದವರ ಮನೆಯಲ್ಲಿ ನಿಧಿ ಇದೆ ಎಂದು ಈ ದುರಂತಕ್ಕೆ ಕೈಹಾಕಿದ್ದಾರೆ.

ಈ ಮೊದಲು ಆತ್ಮಹತ್ಯೆಗೆ ಶರಣಾದವರ ಕುಟುಂಬಗಳಿಗೆ ಸಾಲ ನೀಡಿದ್ದ 25 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಹಾಗೆ 13 ಮಂದಿಯನ್ನು ಬಂಧಿಸಿದ್ದರು. ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿರುವಾಗಲೇ ಈ ಘಟನೆ ಬೆಳಕಿಗೆ ಬಂದಿದೆ.

ವಿವರ: ನಾವು ಒಬ್ಬ ಮಾಂತ್ರಿಕ ಮತ್ತು ಅವನ ಚಾಲಕನನ್ನು ಬಂಧಿಸಿದ್ದೇವೆ. ಈ ಇಬ್ಬರು ವ್ಯಕ್ತಿಗಳು ಕುಟುಂಬದ ಒಂಬತ್ತು ಸದಸ್ಯರಿಗೆ ವಿಷ ಹಾಕಿ ಕೊಂದಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಕೊಲ್ಹಾಪುರ ರೇಂಜ್) ಮನೋಜ್ ಕುಮಾರ್ ಲೋಹಿಯಾ ಮಾಹಿತಿ ನೀಡಿದ್ದಾರೆ.

ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಪೋಪಟ್ ವ್ಯಾನ್ಮೋರ್ (54), ಅವರ ಸಹೋದರ ಮತ್ತು ಪಶುವೈದ್ಯ ಡಾ. ಮಾಣಿಕ್ ವ್ಯಾನ್ಮೋರ್ (49), ಅವರ 74 ವರ್ಷದ ತಾಯಿ, ಪತ್ನಿಯರು ಮತ್ತು ನಾಲ್ವರು ಮಕ್ಕಳು ಜೂನ್ 21ರಂದು ಸಾಂಗ್ಲಿ ಜಿಲ್ಲೆಯ ಮಹೈಸಾಲ್ ಗ್ರಾಮದ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. 1.5 ಕಿ.ಮೀ ಅಂತರದಲ್ಲಿರುವ ಎರಡು ಮನೆಗಳಲ್ಲಿ ಈ ಘಟನೆ ಜರುಗಿತ್ತು.

ಸಾಂಗ್ಲಿಯಲ್ಲಿ 9 ಜನರ ಸಾವಿನ ಪ್ರಕರಣ

ಆರಂಭಿಕ ತನಿಖೆಯಲ್ಲಿ ಇಬ್ಬರು ಸಹೋದರರು ವಿವಿಧ ವ್ಯಕ್ತಿಗಳಿಂದ ಸಾಲ ಪಡೆದಿದ್ದಾರೆ ಎಂದು ತಿಳಿದು ಬಂದಿತ್ತು. ಹಾಗೆ ಕೆಲವರಿಂದ ಹಣವನ್ನು ಸಾಲ ಪಡೆಯಲಾಗಿದೆ. ಅದನ್ನು ಮರುಪಾವತಿಸಲು ಕಷ್ಟವಾಗುತ್ತಿದೆ ಎಂದು ಡೆತ್​ನೋಟ್​ ಎಂದು ಹೇಳಲಾದ ಪತ್ರ ಸಿಕ್ಕಿತ್ತು ಎಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೆಡಮ್ ಹೇಳಿದ್ದಾರೆ.

ಇದನ್ನೂ ಓದಿ : ಮರದಿಂದ ತೊರೆಯಂತೆ ಹರಿದು ಬರುತ್ತಿದೆಯಂತೆ ನೀರು : ಪವಾಡವೆಂದು ಭಾವಿಸಿ ನೂರಾರು ಜನ ಬಂದರು!

ABOUT THE AUTHOR

...view details