ಪುರಿ(ಒಡಿಶಾ):ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡವನ್ನು ಅಂತಾರಾಷ್ಟ್ರೀಯ ಮರಳು ಕಲಾಕೃತಿ ಕಲಾವಿದ ಸುದರ್ಶನ್ ಪಟ್ನಾಯಕ್ ವಿಶೇಷ ರೀತಿಯಲ್ಲಿ ಅಭಿನಂದಿಸಿದ್ದಾರೆ.
ದೇಶದ ಹಾಕಿ ತಂಡವನ್ನು ಅತ್ಯದ್ಭುತವಾಗಿ ಮರಳು ಕಲಾಕೃತಿಯಲ್ಲಿ ರಚಿಸಿ ಶುಭಾಶಯ ಸಲ್ಲಿಸಿದ್ದು, ಕ್ರೀಡಾಭಿಮಾನಿಗಳ ಮತ್ತು ಹಾಕಿ ತಂಡದ ಅಭಿಮಾನಿಗಳ ಗಮನ ಸೆಳೆದಿದೆ.
ಸುದರ್ಶನ್ ಪಟ್ನಾಯಕ್ ಅವರ ಮರಳು ಕಲಾಕೃತಿ ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಪಟ್ನಾಯಕ್, ಭಾರತದ ಹಾಕಿ ತಂಡ ಸುಮಾರು 41 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿದೆ. ಇದು ನಮ್ಮ ದೇಶಕ್ಕೆ ಸುವರ್ಣ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಸ್ಟಾರ್ ಇಂಡಿಯನ್ ಶಟ್ಲರ್ ಪಿ.ವಿ. ಸಿಂಧು ಅವರಿಗೆ ಇದೇ ರೀತಿಯ ಮರಳು ಕಲಾಕೃತಿ ರಚಿಸುವ ಮೂಲಕ ಅಭಿನಂದನೆ ಸಲ್ಲಿಸಿದ್ದರು.
ಇದನ್ನೂ ಓದಿ: ವಿಶೇಷ ಮರಳು ಕಲಾಕೃತಿ ಮೂಲಕ ಪಿ.ವಿ.ಸಿಂಧುರನ್ನು ಅಭಿನಂದಿಸಿದ ಕಲಾವಿದ