ಬರ್ಹಾಂಪುರ (ಒಡಿಶಾ):ಇಂದು ಕ್ರಿಸ್‌ಮಸ್ ಹಬ್ಬದ ಸಂಭ್ರಮ. ಏಸುಕ್ರಿಸ್ತ ಜನಿಸಿದ ದಿನವನ್ನು ಆಚರಿಸುವ ಪುಣ್ಯ ದಿನ. ವಿಶ್ವಾದ್ಯಂತ ಆಚರಿಸುವ ಹಬ್ಬಗಳಲ್ಲಿ ಇದೂ ಕೂಡ ಒಂದು. ಹಬ್ಬದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮರಳು ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಗೋಪಾಲ್‌ಪುರ ಬೀಚ್‌ನಲ್ಲಿ ಸಾಂಟಾ ಕ್ಲಾಸ್‌ನ ಬೃಹತ್ ಮರಳು ಶಿಲ್ಪವನ್ನು ಟೊಮೆಟೊಗಳಿಂದ ರಚಿಸಿದ್ದು, ಗಮನ ಸೆಳೆಯುತ್ತಿದೆ.
ಕಲಾಕಾರ ಸುದರ್ಶನ್ ಅವರು, ಬೀಚ್‌ನಲ್ಲಿ 27 ಅಡಿ ಎತ್ತರ, 60 ಅಡಿ ಅಗಲದ ಮರಳಿನ ಸಾಂಟಾ ಕ್ಲಾಸ್ ಅನ್ನು ಸುಮಾರು 1,500 ಕೆಜಿ ಟೊಮೆಟೊಗಳೊಂದಿಗೆ 'ಮೆರಿ ಕ್ರಿಸ್ಮಸ್' ಎಂಬ ಶುಭಾಶಯ ಸಂದೇಶವನ್ನು ಕೂಡ ಬಿಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದರ್ಶನ್,' ಕ್ರಿಸ್ಮಸ್ಗೂ ಒಂದು ದಿನದ ಮೊದಲು ಒಡಿಶಾದ ಗೋಪಾಲ್‌ಪುರ ಬೀಚ್‌ನಲ್ಲಿ ವಿಶ್ವದ ಅತಿದೊಡ್ಡ ಟೊಮೆಟೊ ಮತ್ತು ಮರಳು ಮಿಶ್ರಿತ ಸಾಂಟಾಕ್ಲಾಸ್ ನಿರ್ಮಿಸಿದ್ದೇವೆ. ಇದು 1.5 ಟನ್ ಟೊಮೆಟೊದಿಂದ 27 ಅಡಿ ಎತ್ತರದ 60 ಅಗಲದಿಂದ ಕೂಡಿದೆ. ಇದರ ರಚನೆಯಲ್ಲಿ ನನ್ನ ವಿದ್ಯಾರ್ಥಿಗಳು ನೆರವು ನೀಡಿದರು' ಎಂದು ಬರೆದುಕೊಂಡಿದ್ದಾರೆ.