ಪುರಿ, ಒಡಿಶಾ:75 ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಮರಳು ಕಲಾಕೃತಿಯೊಂದರ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನ ಕೋರಿದ್ದಾರೆ.
ಟ್ವಿಟರ್ನಲ್ಲಿ ಈ ಕುರಿತು ಪೋಸ್ಟ್ ಮಾಡಿ ಮರಳು ಕಲಾಕೃತಿಯ ಚಿತ್ರವನ್ನು ಸುದರ್ಶನ್ ಪಟ್ನಾಯಕ್ ಹಂಚಿಕೊಂಡಿದ್ದು, ನನ್ನ ವಿದ್ಯಾರ್ಥಿಗಳು 75ನೇ ಸ್ವಾತಂತ್ರ್ಯ ದಿನಾಚರಣೆಗೆ ರಚಿಸಿರುವ ಮರಳು ಕಲಾಕೃತಿ ಎಂದು ಉಲ್ಲೇಖಿಸಿದ್ದಾರೆ.