ಕರ್ನಾಟಕ

karnataka

ETV Bharat / bharat

ಅಂದು ತುರ್ತು ಭೂಸ್ಪರ್ಶ ಮಾಡಿದ್ದ ಏರ್​ ಇಂಡಿಯಾ ವಿಮಾನ ಇಂದು ತಾಂತ್ರಿಕ ದೋಷದ ನಿಮಿತ್ತ ರದ್ದು - ತುರ್ತು ಭೂಸ್ಪರ್ಶ

ಇದೇ ವಿಮಾನ ಜೂನ್​ನಲ್ಲಿ ರಷ್ಯಾದ ಮಗದನ್​ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

san-francisco-flight-canceled-due-to-the-operational-issue
ತಾಂತ್ರಿಕ ಕಾರ್ಯಚರಣೆ ನಿಮಿತ್ತ ರದ್ದು

By ETV Bharat Karnataka Team

Published : Oct 3, 2023, 8:07 AM IST

ನವದೆಹಲಿ: ಇಂದು ಮುಂಜಾನೆ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಡಬೇಕಿದ್ದ ಏರ್ ಇಂಡಿಯಾ ಫ್ಲೈಟ್ AI-173, ನಿಗದಿತ ಸಮಯಕ್ಕೆ ಟೇಕ್-ಆಫ್ ಆಗುವ ಕೆಲವೇ ಗಂಟೆಗಳ ಮೊದಲು ತಾಂತ್ರಿಕ ಸಮಸ್ಯೆಗಳ ನಿಮಿತ್ತ ರದ್ದುಗೊಂಡಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ವಿಮಾನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಬೆಳಗ್ಗೆ 6 ಗಂಟಗೆ ಟೇಕ್​ ಆಫ್​ ಆಗಬೇಕಿತ್ತು.

ಆದರೆ, ಟೇಕ್​ ಆಫ್​ ಆಗುವ ಕೆಲವೇ ಗಂಟೆಗಳ ಮೊದಲು ಪ್ರಯಾಣಿಕರಿಗೆ ಏರ್​ ಇಂಡಿಯಾ ವಿಮಾನ ರದ್ದುಗೊಳಿಸಿರುವ ಬಗ್ಗೆ ಸಂದೇಶ ರವಾನಿಸಿ, ಮಾಹಿತಿ ನೀಡಿದೆ. ಮಧ್ಯಾಹ್ನ ಸ್ಯಾನ್​ ಫ್ರಾನ್ಸಿಸ್ಕೋಗೆ ಬೋಯಿಂಗ್​ 777 ಪರ್ಯಾಯ ವಿಮಾನ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೂ ಎಲ್ಲಾ ಪ್ರಯಾಣಿಕರ ಬಗ್ಗೆ ಕಾಳಜಿ ವಹಿಸಲಾಗಿದ್ದು, ಟಿಕೆಟ್​ ರದ್ದು​ ಮಾಡಿದವರಿಗೆ ಪರಿಹಾರದ ಪ್ಯಾಕೇಜ್​ ಜೊತೆಗೆ ಸಂಪೂರ್ಣ ಮರುಪಾವತಿಯನ್ನು ಪಡೆದು ಕೊಂಡಿದ್ದಾರೆ. ಮಧ್ಯಾಹ್ನದ ಪರ್ಯಾಯ ವಿಮಾನದಲ್ಲಿ ಹೊರಡಲಿರುವ ಪ್ರಯಾಣಿಕರಿಗೆ ಹೋಟೆಲ್​ ವಾಸ್ತವ್ಯದ ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದು ಏರ್​ ಇಂಡಿಯಾ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಂದು ರದ್ದಾದ ವಿಮಾನ ಇದೇ ವರ್ಷ ಜೂನ್​ನಲ್ಲಿ ದೆಹಲಿಯಿಂದ ಸ್ಯಾನ್​ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದಾಗ ತಾಂತ್ರಿಕ ಸಮಸ್ಯೆಗೆ ಒಳಗಾಗಿತ್ತು. ವಿಮಾನದ ಎಂಜಿನ್​ನಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆಯಿಂದಾಗಿ ರಷ್ಯಾದ ಮಗದನ್​ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ​ ಮಾಡಲಾಗಿತ್ತು. 216 ಪ್ರಯಾಣಿಕರು ಹಾಗೂ 16 ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ವಿಮಾನ, ಹಾರಾಟದ ವೇಳೆ ಸಮಸ್ಯೆ ಎದುರಿಸಿತ್ತು. ವಿಮಾನದಲ್ಲಿದ್ದ ಎಲ್ಲರ ಸುರಕ್ಷತೆ ದೃಷ್ಟಿಯಿಂದ ಪೈಲಟ್​ ತಕ್ಷಣ ಕ್ರಮ ಕೈಗೊಂಡು, ವಿಮಾನವನ್ನು ಮಗದನ್​ ವಿಮಾನನಿಲ್ದಾಣಕ್ಕೆ ತಿರುಗಿಸಿ ಲ್ಯಾಂಡ್​ ಮಾಡಲಾಗಿತ್ತು.

ಈ ವೇಳೆ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಮುಂಬೈನಿಂದ ಮತ್ತೊಂದು ವಿಮಾನವನ್ನು ರವಾನೆ ಮಾಡಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಸ್ಥಳಗಳಿಗೆ ರವಾನೆ ಮಾಡಲಾಗಿತ್ತು. ಈ ಬಗ್ಗೆ ಏರ್​ ಇಂಡಿಯಾ ಪ್ರಯಾಣಿಕರಿಗೆ ಆದ ಅಡಚಣೆ ಬಗ್ಗೆ ವಿಷಾದ ವ್ಯಕ್ತಪಡಿಸಿತ್ತು.

ಇದಾದ ಕೆಲವೇ ತಿಂಗಳಲ್ಲಿ ಅದೇ ವಿಮಾನದಲ್ಲಿ ಮತ್ತೊಮ್ಮೆ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಆ ವಿಮಾನದ ಹಾರಾಟ ರದ್ದು ಮಾಡಲಾಗಿದ್ದು, ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ ಪ್ರಯಾಣಿಕರಿಗೆ ಆದ ಅಡಚಣೆಗೆ ವಿಷಾದ ವ್ಯಕ್ತಪಡಿಸಿದ್ದು, ಪರಿಹಾರದ ಪ್ಯಾಕೇಜ್​ ಕೂಡಾ ನೀಡಲಾಗಿದೆ.

ಇದನ್ನೂ ಓದಿ :ನಾಗ್ಪುರ-ಬೆಂಗಳೂರು ಇಂಡಿಗೋ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನ; ಪ್ರಯಾಣಿಕನ ಬಂಧನ, ಬಿಡುಗಡೆ

ABOUT THE AUTHOR

...view details