ಸಿಯೋಲ್: ಸೌತ್ ಕೊರಿಯಾ ಮೂಲದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ತನ್ನ ಗ್ಯಾಲಕ್ಸಿ - ಬುಕ್ ಸರಣಿಯಲ್ಲಿ ಹೊಸ ಲ್ಯಾಪ್ಟಾಪ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೊರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ ಬಹುತೇಕ ಕೆಲಸಗಳು ವರ್ಕ್ ಫ್ರಂ ಹೋಮ್ ಮಾದರಿಯಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ವಿಶ್ವಾದ್ಯಂತ ಲ್ಯಾಪ್ಟಾಪ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡ ಕಂಪನಿ ಹೊಸ ಅವಕಾಶಗಳನ್ನು ಲಾಭವಾಗಿ ಪರಿವರ್ತಿಸಿಕೊಳ್ಳಲು ಹೊಸ ಲ್ಯಾಪ್ಟಾಪ್ ಶ್ರೇಣಿಯನ್ನು ಬಿಡುಗಡೆ ಮಾಡಿದೆ.
ಕ್ವಾಲ್ಕಾಂ ಸ್ನ್ಯಾಪ್ ಡ್ರ್ಯಾಗನ್ ಪ್ಲಾಟ್ಫಾರ್ಮ್ ಹೊಂದಿರುವ ಗ್ಯಾಲಕ್ಸಿ ಬುಕ್ ಗೋ ಹಾಗೂ ಗ್ಯಾಲಕ್ಸಿ ಬುಕ್ ಗೋ 5ಜಿ ಹೆಸರಿನ ಹೊಸ ಲ್ಯಾಪ್ಟಾಪ್ಗಳನ್ನು ಸ್ಯಾಮ್ಸಂಗ್ ಪರಿಚಯಿಸಿದೆ.
Galaxy Book Go ; ಹೊಸ ಲ್ಯಾಪ್ಟಾಪ್ ಪರಿಚಯಿಸಿದ ಸ್ಯಾಮ್ಸಂಗ್ ಗ್ಯಾಲಕ್ಸಿ ಗೋ 5ಜಿ ಇದು ಕ್ವಾಲ್ಕಾಂ ಸ್ನ್ಯಾಪ್ ಡ್ರ್ಯಾಗನ್ 8cx Gen 2 5G ಪ್ಲಾಟ್ಫಾರ್ಮ್ ಹಾಗೂ ಗ್ಯಾಲಕ್ಸಿ ಬುಕ್ ಗೋ LTE ಮಾದರಿಯು ಕ್ವಾಲ್ಕಾಂ ಸ್ನ್ಯಾಪ್ ಡ್ರ್ಯಾಗನ್ 7c Gen 2 ಸಿಸ್ಟಂ ಹೊಂದಿವೆ.
ಇನ್ನು ಗ್ಯಾಲಕ್ಸಿ ಬುಕ್ ಗೋ ವೈ-ಫೈ ಹಾಗೂ LTE ಮಾಡೆಲ್ಗಳು ಈ ತಿಂಗಳಾಂತ್ಯಕ್ಕೆ ಕೆಲ ಆಯ್ದ ಮಾರುಕಟ್ಟೆಗಳಲ್ಲಿ ಲಭ್ಯವಾವೆ. ಸದ್ಯ ಇವುಗಳ ಬೆಲೆ 349 ಯುಎಸ್ ಡಾಲರ್ಗಳಾಗಿದೆ. 5ಜಿ ಮಾದರಿಯು ವರ್ಷಾಂತ್ಯಕ್ಕೆ ಎಲ್ಲೆಡೆ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
Galaxy Book Go ; ಹೊಸ ಲ್ಯಾಪ್ಟಾಪ್ ಪರಿಚಯಿಸಿದ ಸ್ಯಾಮ್ಸಂಗ್ ಹೊಸ ಬುಕ್ ಗೋ ಸರಣಿಯ ಲ್ಯಾಪ್ಟಾಪ್ಗಳು ಮೈಕ್ರೊಸಾಫ್ಟ್ ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ, 14 ಇಂಚಿನ ಪರದೆ, 180 ಡಿಗ್ರಿ ಮಡಚಬಹುದಾದ ಸೌಲಭ್ಯ, ಡಾಲ್ಬಿ ಆಟ್ಮಾಸ್ ಸ್ಪೀಕರ್ಗಳನ್ನು ಹೊಂದಿವೆ.