ನವದೆಹಲಿ : ಕೈಗೆಟುಕುವ ಬೆಲೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 5ಜಿ (Galaxy F14 5G) ಸ್ಮಾರ್ಟ್‌ಫೋನ್ ಭಾರತದಲ್ಲಿ ಮುಂದಿನ ವಾರ ಬಿಡುಗಡೆಯಾಗಲಿದೆ. 15,000 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಇದು ಲಭ್ಯವಾಗಲಿದೆ ಎಂದು ಉದ್ಯಮ ಮೂಲಗಳು ಸೋಮವಾರ ತಿಳಿಸಿವೆ. ಗ್ಯಾಲಕ್ಸಿ ಎಫ್14 5G 6000mAh ಬ್ಯಾಟರಿ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ನೀಡಲು ಶಕ್ತಿಯುತ 5 nm Exynos ಚಿಪ್‌ಸೆಟ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ. ಕಡಿಮೆ ಬೆಲೆಯ ಫೋನ್ಗಳ ವಿಭಾಗದಲ್ಲಿ ಇದು ಕಂಪನಿಯ ಪ್ರಮುಖ ಉತ್ಪನ್ನವಾಗಲಿದೆ.
ಇದರಲ್ಲಿನ ಆಕ್ಟಾ ಕೋರ್ ಸಿಪಿಯು ಒಂದು ಆರ್ಮ್ ಕೊರೆಟೆಕ್ಸ್-ಎ78 ಡ್ಯುಯಲ್-ಕೋರ್ ಮತ್ತು ಕಾರ್ಟೆಕ್ಸ್-ಎ55 ಹೆಕ್ಸಾ-ಕೋರ್ ಪ್ರೊಸೆಸರ್ಗಳನ್ನು ಹೊಂದಿರಲಿದ್ದು, ಉತ್ತಮ ಕಾರ್ಯಕ್ಷಮತೆಯನ್ನು ಖಾತರಿ ಪಡಿಸಲಿವೆ. ಗ್ಯಾಲಕ್ಸಿ ಎಫ್14 5ಜಿ ಈ ವರ್ಷ ಭಾರತದಲ್ಲಿ ಸ್ಯಾಮ್‌ಸಂಗ್‌ನ ಎರಡನೇ ಎಫ್ ಸರಣಿಯ ಸ್ಮಾರ್ಟ್‌ಫೋನ್ ಆಗಿದೆ. ಕಂಪನಿಯು ಈ ಹಿಂದೆ ಜನವರಿಯಲ್ಲಿ Galaxy F04 ಅನ್ನು ಬಿಡುಗಡೆ ಮಾಡಿತ್ತು.
ಈ ತಿಂಗಳ ಕೊನೆಯಲ್ಲಿ ಈ ಸಾಧನವು ದೇಶಾದ್ಯಂತ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆಯಿದೆ. Galaxy F ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್ ಆನ್‌ಲೈನ್ ಸ್ಟೋರ್ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟಕ್ಕೆ ಸಿಗಲಿದೆ. ದೇಶದಲ್ಲಿ ತನ್ನ 5G ಅಗ್ರ ಸ್ಥಾನವನ್ನು ಬಲಗೊಳಿಸಲು ಸ್ಯಾಮ್‌ಸಂಗ್ ಈ ವರ್ಷ ಭಾರತದಲ್ಲಿ ಹಲವಾರು 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ವಾರ ದೇಶದಲ್ಲಿ ಎರಡು ಹೊಸ A ಸರಣಿಯ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ A34 5G ಮತ್ತು ಗ್ಯಾಲಕ್ಸಿ A54 5G ಗಳನ್ನು ಬಿಡುಗಡೆ ಮಾಡಲಿದೆ.