ಕರ್ನಾಟಕ

karnataka

ETV Bharat / bharat

ಕೇಂದ್ರ ಸಚಿವ ರಾಮದಾಸ್ ಅಠಾವಳೆ ಭೇಟಿ ಮಾಡಿದ ಸಮೀರ್ ವಾಂಖೆಡೆ ಅವರ ತಂದೆ, ಪತ್ನಿ - ರಾಮದಾಸ್ ಅಠಾವಳೆ ಭೇಟಿ ಮಾಡಿದ ಸಮೀರ್ ವಾಂಖೆಡೆ ಅವರ ತಂದೆ, ಪತ್ನಿ

ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಮಾನಹಾನಿ ಮಾಡುವುದನ್ನು ನಿಲ್ಲಿಸುವಂತೆ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರಿಗೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸೂಚಿಸಿದ್ದಾರೆ.

Sameer Wankhede's father, wife meet Ramdas Athawale
ರಾಮದಾಸ್ ಅಠಾವಳೆ ಭೇಟಿ ಮಾಡಿದ ಸಮೀರ್ ವಾಂಖೆಡೆ ಅವರ ತಂದೆ, ಪತ್ನಿ

By

Published : Oct 31, 2021, 6:54 PM IST

ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮುಂಬೈ ವಲಯದ ನಿರ್ದೇಶಕ ಸಮೀರ್ ವಾಂಖೆಡೆ ಅವರ ತಂದೆ ಜ್ಞಾನದೇವ್ ವಾಂಖೆಡೆ ಮತ್ತು ಪತ್ನಿ ಕ್ರಾಂತಿ ರೆಡ್ಕರ್ ವಾಂಖೆಡೆ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ ಅವರನ್ನು ಇಂದು ಭೇಟಿಯಾಗಿದ್ದರು.

ರಾಮದಾಸ್ ಅಠಾವಳೆ ಮಾತನಾಡಿ, ಆರ್‌ಪಿಐ ಪರವಾಗಿ ನಾನು ನವಾಬ್ ಮಲಿಕ್‌ಗೆ ಸಮೀರ್ ಮತ್ತು ಅವರ ಕುಟುಂಬದ ಮಾನಹಾನಿ ಮಾಡುವ ಪಿತೂರಿ ನಿಲ್ಲಿಸುವಂತೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಹೆಚ್ಚಿನ ಓದಿಗೆ: ಸಮೀರ್ ವಾಂಖೆಡೆ ಇಸ್ಲಾಂ ಅನುಯಾಯಿ.. ಅವರ ತಂದೆ ಹೆಸರು ದಾವೂದ್: ಮೊದಲ ಪತ್ನಿ ತಂದೆ ಸ್ಪಷ್ಟನೆ

ನಾವು ಇಂದು ಇಲ್ಲಿಗೆ ಬಂದಿದ್ದೇವೆ, ಅಠಾವಳೆ ಅವರು ಮಲಿಕ್ ದಲಿತರ ಸ್ಥಾನವನ್ನು ಕಸಿದುಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ಅಠಾವಳೆ ಅವರು ದಲಿತರ ಬಗ್ಗೆ ಕಾಳಜಿ ವಹಿಸಿ ನಮ್ಮೊಂದಿಗೆ ನಿಂತಿದ್ದಾರೆ. ಇಲ್ಲಿಯವರೆಗೆ ನವಾಬ್ ಮಲಿಕ್ ಅವರ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಬೀತಾಗಿವೆ ಎಂದು ಸಮೀರ್ ವಾಂಖೆಡೆ ಅವರ ಪತ್ನಿ ಕ್ರಾಂತಿ ರೆಡ್ಕರ್ ವಾಂಖೆಡೆ ಹೇಳಿದ್ದಾರೆ.

ABOUT THE AUTHOR

...view details