ಕರ್ನಾಟಕ

karnataka

ಬೈಕ್​ಗೆ ಡಿಕ್ಕಿ ಹೊಡೆದ ಕಾರು... ತಂದೆ, ತಾಯಿ, ಮಗ ದುರ್ಮರಣ!

By

Published : May 10, 2021, 11:10 AM IST

ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಸಂಭವಿಸಿದೆ.

Three people died, Three people died in road accidents, Three people died in road accidents in Guntur, Guntur crime news, Guntur accidents news, Car collided with bike, ಮೂರು ಜನ ಸಾವು, ರಸ್ತೆ ಅಪಘಾತದಲ್ಲಿ ಮೂರು ಜನ ಸಾವು, ಗುಂಟೂರು ಜಿಲ್ಲೆಯಲ್ಲಿ ರಸ್ತೆ ಅಪಘಾದಲ್ಲಿ ಮೂರು ಜನ ಸಾವು, ಗುಂಟೂರು ಅಪರಾಧ ಸುದ್ದಿ, ಗುಂಟೂರು ಅಪಘಾತ ಸುದ್ದಿ, ಬೈಕ್​ಗೆ ಡಿಕ್ಕಿ ಹೊಡೆದ ಕಾರು,
ಬೈಕ್​ಗೆ ಡಿಕ್ಕಿ ಹೊಡೆದ ಕಾರು

ಗುಂಟೂರು:ಭೀಕರ ರಸ್ತೆ ಅಪಘಾತದಲ್ಲಿ ತಂದೆ, ತಾಯಿ ಮತ್ತು ಮಗ ಸಾವನ್ನಪ್ಪಿರುವ ಘಟನೆ ವೇಮುಲುಉರಿಪಾಡು ಬಳಿ ನಡೆದಿದೆ.

ಒಂದೇ ಸಮಯಕ್ಕೆ ಪ್ರಾಣ ಬಿಟ್ಟ ತಂದೆ, ತಾಯಿ, ಮಗ

ಪಿರಂಗಿಪುರಂ ತಾಲೂಕಿನ ತಾಳ್ಲೂರಿನ ನಿವಾಸಿ ಶೇಖ್​ ಚಿನ ಮಸ್ತಾನ್​ ಮತ್ತು ಆತನ ಹೆಂಡ್ತಿ ನೂರ್ಜಹಾನ್​ ಹಾಗೂ ಆತನ ಮಗ ಹುಸೇನ್ ಕೆಲಸದ ನಿಯಮಿತ ಬೈಕ್​ ಮೇಲೆ ಗುಂಟೂರಿಗೆ ಹೋಗುತ್ತಿದ್ದರು. ಈ ವೇಳೆ ವೇಮುಲುರಿಪಾಡು ಪ್ರದೇಶದ ತುಳಸಿ ಸೀಡ್ಸ್​ ಕಂಪನಿ ಹತ್ತಿರ ಗುಂಟೂರಿನಿಂದ ನರಸರಾವು ಪೇಟಕ್ಕೆ ಹೋಗುತ್ತಿದ್ದ ಕಾರು ಇವರಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ತಂದೆ, ತಾಯಿ ಮತ್ತು ಮಗ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರ ನೆರವಿನಿಂದ ಮೂವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಮೂವರು ಸಾವನ್ನಪ್ಪಿದ್ದಾರೆ. ಈ ಸುದ್ದಿ ತಿಳಿದ ಸಂಬಂಧಿಕರು ಆಸ್ಪತ್ರೆಗೆ ದೌಡಾಯಿಸಿದ್ದರು. ಈ ವೇಳೆ ಸಂಬಂಧಿಕರ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details