ಹೈದರಾಬಾದ್: ಛತ್ರಪತಿ ಶಿವಾಜಿಯ 13ನೇ ಉತ್ತರಾಧಿಕಾರಿ, ಕೊಲ್ಹಾಪುರದ ಸಾಹು ಮಹಾರಾಜ್ ಅವರ ಮೊಮ್ಮಗ ಮಾಜಿ ಸಂಸದ ಸಂಭಾಜಿ ರಾಜೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗಿದ್ದಾರೆ. ಹೈದರಾಬಾದ್ನ ಪ್ರಗತಿಭವನದಲ್ಲಿ ಈ ಭೇಟಿ ನಡೆದಿದ್ದು, ಇದೇ ವೇಳೆ ಸಂಭಾಜಿ ರಾಜೆ, ತೆಲಂಗಾಣ ಮಾದರಿ ಅಭಿವೃದ್ಧಿ ಮಹರಾಷ್ಟ್ರದಲ್ಲಿ ಕೂಡ ಅಳವಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಇಬ್ಬರು ನಾಯಕರು, ದೇಶದ ರಾಜಕೀಯ ಸ್ಥಿತಿಗತಿ ಮತ್ತು ಇತರೆ ವಿಷಯದ ಕುರಿತು ಚರ್ಚೆ ನಡೆಸಿದರು. ಇನ್ನು ತೆಲಂಗಾಣದಲ್ಲಿನ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮದ ಕುರತು ರಾಜೆ, ಕೆಸಿಆರ್ ಬಳಿ ಮಾಹಿತಿ ಪಡೆದರು. ತೆಲಂಗಾಣ ಮಾದರಿ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳನ್ನು ಮಹಾರಾಷ್ಟ್ರದಲ್ಲೂ ಅಳವಡಿಸಬೇಕು. ಮಹಾರಾಷ್ಟ್ರ ಮಾತ್ರವಲ್ಲದೇ ದೇಶಾದ್ಯಂತ ತೆಲಂಗಾಣ ಮಾದರಿ ಪಸರಿಸಬೇಕು ಎಂದು ಸಂಭಾಜಿ ರಾಜೆ ತಿಳಿಸಿದರು. ರಾಷ್ಟ್ರೀಯ ಸಮಗ್ರತೆ, ಅಭಿವೃದ್ಧಿ ಮತ್ತು ದೇಶದ ಜನರ ಕಲ್ಯಾಣದಲ್ಲಿ ಅವಿಷ್ಕಾರದ ಅಜೆಂಡಾದ ಅವಶ್ಯಕತೆ ಇದೆ.
ಚುನಾವಣಾ ಭರವಸೆ ಹೊರತಾಗಿ ಸಾರ್ವಜನಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯಿಂದ ಕೆಸಿಆರ್ ಕಾರ್ಯ ನಿರ್ವಹಿಸುತ್ತಿದ್ದಾರೆ. 14 ವರ್ಷದ ತೆಲಂಗಾಣ ಆಡಳಿತದಲ್ಲಿ ಅನೇಕ ಅಭಿವೃದ್ಧಿಯನ್ನು ಅವರು ತಂದಿದ್ದಾರೆ. ಕೃಷಿ ನೀತಿ, ನೀರಾವರಿ, ಸಾರ್ವಜನಿಕ ಸೇರಿದಂತೆ ಹಲವು ಯೋಜನೆಗಳನ್ನು ಬಡವರಿಗಾಗಿ ತಂದಿದ್ದಾರೆ ಎಂದು ಅವರ ಆಡಳಿತ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಛತ್ರಪತಿ ಶಿವಾಜಿ ಅವರು ಸಾಹು ಮಹಾರಾಜರಿಗೆ ಸಮಾನತೆ, ಜನಕಲ್ಯಾಣ ಮಾರ್ಗದಲ್ಲಿ ನೀಡಿದ ಆಡಳಿತ ದೇಶದ ಇತಿಹಾಸದಲ್ಲಿ ಉಳಿಯುತ್ತದೆ ಎಂದು ಸಿಎಂ ಕೆಸಿಆರ್ ಹೇಳಿದರು. ಶಿವಾಜಿ ಮಹರಾಜ್ ಮತ್ತು ಸಹು ಮಹರಾಜ್ ಅವರಿಂದ ತೆಲಂಗಾಣದಲ್ಲಿ ಜಾತಿ ತಾರತಮ್ಯ ಹೋಗಲಾಡಿಸಿದರು.