ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿರುವ ಕುರಿತು ಸಮಾಜವಾದಿ ಪಕ್ಷದ ಸಂಸದ ಶಫಿಕರ್ ರೆಹಮಾನ್ ಬಾರ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಾಲಿಬಾನ್‌ಗಳು ಅಫ್ಘಾನ್‌ನಲ್ಲಿ ಸ್ವಾತಂತ್ರ್ಯವನ್ನು ಬಯಸಿದ್ದಾರೆ ಎಂದು ಭಾರತದ ಸ್ವಾತಂತ್ರ್ಯ ಚಳುವಳಿಗೆ ಹೋಲಿಸಿ ಹೇಳಿದ್ದಾರೆ. ಉತ್ತರ ಪ್ರದೇಶ ಸಂಭಾಲ್ ಲೋಕಸಭಾ ಸಂಸದ ಶಫಿಕರ್ ಅವರ ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ರಷ್ಯಾ ಮತ್ತು ಅಮೆರಿಕ ಅಫ್ಘಾನಿಸ್ತಾನವನ್ನು ಆಳಲು ತಾಲಿಬಾನ್ ಅನುಮತಿಸುವುದಿಲ್ಲ. ಈಗ ಅವರು ತಮ್ಮ ದೇಶವನ್ನು ಆಳಲು ಬಯಸುತ್ತಾರೆ. ದೇಶವನ್ನು ಬ್ರಿಟಿಷರು ಆಳಿದಾಗ, ಇಡೀ ದೇಶವು ಅವರ ವಿರುದ್ಧ ಹೋರಾಡಿತು. ಅದೇ ರೀತಿ, ಅವರಿಗೆ ಸ್ವಾತಂತ್ರ್ಯ ಬೇಕು. ಅದು ಅವರ ಆಂತರಿಕ ವ್ಯವಹಾರವಾಗಿದೆ. ನಾವು ಅದರಲ್ಲಿ ಹೇಗೆ ಹಸ್ತಕ್ಷೇಪ ಮಾಡುತ್ತೇವೆ ಎಂದು ಪ್ರಶ್ನಿಸಿದ್ದಾರೆ.