ಮಧುರೈ/ಗುರುಗ್ರಾಮ್:ಕೊರೊನಾ ವಿರುದ್ಧ ಹೋರಾಡಲು ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಕೇವಲ ಸರ್ಕಾರ ಮಾತ್ರವಲ್ಲ ಖಾಸಗಿ ವಲಯಗಳ ವ್ಯಾಪಾರಿಗಳೂ ಜಾಗೃತಿ ಮೂಡಿಸುತ್ತಿದ್ದಾರೆ. ಫಾಸ್ಟ್ ಫುಡ್ ಕಂಪನಿಯಾದ ಮೆಕ್ ಡೊನಾಲ್ಡ್ ಇತ್ತೀಚೆಗಷ್ಟೇ ಲಸಿಕೆ ಪಡೆದ ತನ್ನ ಗ್ರಾಹಕರಿಗೆ ಶೇ.20 ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿತ್ತು. ದೆಹಲಿಯ ಒಂದು ರೆಸ್ಟಾರೆಂಟ್ನಲ್ಲಿ ಶೇ.30 ರಷ್ಟು ರಿಯಾಯಿತಿಯಲ್ಲಿ ಬಿರಿಯಾನಿ ಮಾರಾಟ ಮಾಡಲು ಆರಂಭಿಸಿತ್ತು.
ಲಸಿಕೆ ಹಾಕಿಸ್ಕೊಂಡವರಿಗೆ ಇಲ್ಲಿನ ಸಲೂನ್, ರೆಸ್ಟಾರೆಂಟ್ಗಳಲ್ಲಿ ಶೇ. 50 ರಷ್ಟು ರಿಯಾಯಿತಿ - Gurugram , Haryana
ಮಧುರೈನ ಸಲೂನ್ವೊಂದು ಕೋವಿಡ್ 19 ವ್ಯಾಕ್ಸಿನೇಷನ್ ಪ್ರಮಾಣಪತ್ರಗಳೊಂದಿಗೆ ಬರುವ ಗ್ರಾಹಕರಿಗೆ ಶೇ.50 ರಷ್ಟು ರಿಯಾಯಿತಿ ನೀಡುವುದಾಗಿ ಹೇಳಿದ್ದರೆ, ಗುರುಗ್ರಾಮ್ನಲ್ಲಿ ಮಾಲ್, ಪಬ್ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರು ಲಸಿಕೆ ತೆಗೆದುಕೊಂಡ ಜನರಿಗೆ ಉಚಿತ ಪಾರ್ಕಿಂಗ್ ಹಾಗೂ ಶಾಪಿಂಗ್, ಆಹಾರದಲ್ಲಿ ರಿಯಾಯಿತಿ ನೀಡುತ್ತಿವೆ.
ಇದೀಗ ತಮಿಳುನಾಡಿನಲ್ಲಿ ಕೋವಿಡ್ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ಸಲೂನ್ಗಳನ್ನು ತೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮಧುರೈನ ಸಲೂನ್ವೊಂದು ಕೋವಿಡ್ 19 ವ್ಯಾಕ್ಸಿನೇಷನ್ ಪ್ರಮಾಣಪತ್ರಗಳೊಂದಿಗೆ ಬರುವ ಗ್ರಾಹಕರಿಗೆ ಶೇ.50 ರಷ್ಟು ರಿಯಾಯಿತಿ ನೀಡುವುದಾಗಿ ಬಂಪರ್ ಆಫರ್ ನೀಡಿದೆ. ಕೊರೊನಾ 3ನೇ ಅಲೆಯಿಂದ ಪಾರಾಗಲು ನಾವು ಲಸಿಕೆ ಹಾಕಿಸಿಕೊಳ್ಳುವುದು ಅನಿವಾರ್ಯ. ಹೀಗಾಗಿ ನಾವು ಈ ಮೂಲಕವಾದರೂ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿರುವುದಾಗಿ ಸಲೂನ್ ಮಾಲೀಕ ಕಾರ್ತಿಕೇಯನ್ ಹೇಳುತ್ತಾರೆ.
ಇನ್ನು ಹರಿಯಾಣದ ಗುರುಗ್ರಾಮ್ನಲ್ಲಿ ಮಾಲ್, ಪಬ್ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರು ವ್ಯಾಕ್ಸಿನೇಷನ್ ಉತ್ತೇಜಿಸುವ ಉದ್ದೇಶದಿಂದ ಕೋವಿಡ್ ಲಸಿಕೆ ತೆಗೆದುಕೊಂಡ ಜನರಿಗೆ ಉಚಿತ ಪಾರ್ಕಿಂಗ್ ಹಾಗೂ ಶಾಪಿಂಗ್, ಆಹಾರದಲ್ಲಿ ರಿಯಾಯಿತಿ ನೀಡುತ್ತಿವೆ. ಒಂದು ಮಾಲ್ನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಶೇ.10 ರಷ್ಟು ರಿಯಾಯಿತಿ ನೀಡುತ್ತಿದೆ. ಇನ್ನೊಂದು ಪಬ್ನಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದವರಿಗೆ ಶೇ.25 ಹಾಗೂ ಎಡರೂ ಡೋಸ್ ಪಡೆದವರಿಗೆ ಶೇ.50ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದೆ.