ಕರ್ನಾಟಕ

karnataka

ETV Bharat / bharat

ಮೊಬೈಲ್​ ಕಿತ್ತುಕೊಂಡ ಪ್ರಕರಣ : ಸಲ್ಮಾನ್​ ಖಾನ್​ ಮೇಲೆ ಸಮನ್ಸ್​ ಜಾರಿ - ಐಪಿಸಿಯ ಸೆಕ್ಷನ್ 324, 392, 426, 506 (II), R/W34 ಅಡಿಯಲ್ಲಿ ಸಲ್ಮಾನ್​ ಖಾನ್​ ಮೇಲೆ ದೂರು ದಾಖಲು

ಸಲ್ಮಾನ್ ಖಾನ್‌ಗೆ ನೀಡಿದ ಸಮನ್ಸ್ ಪ್ರಕಾರ, ಅವರು ಏ. 5ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಮುಂಬೈನ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ಸಲ್ಮಾನ್ ವಿರುದ್ಧ ದೂರು ದಾಖಲಿಸಿದ್ದರು..

Salman Khan
ಸಲ್ಮಾನ್​ ಖಾನ್

By

Published : Apr 5, 2022, 5:19 PM IST

ಹೈದರಾಬಾದ್ :ಬಾಲಿವುಡ್ ನಟ ಸಲ್ಮಾನ್ ಖಾನ್ ಈಗಾಗಲೇ ಕೆಲವು ಪ್ರಕರಣಗಳಲ್ಲಿ ಹಲವು ಬಾರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದೀಗ ಫೋನ್ ಕಿತ್ತುಕೊಂಡ ಪ್ರಕರಣದಲ್ಲಿ ಸಲ್ಲು ಮತ್ತೇ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ದೂರುದಾರ ಅಶೋಕ್ ಶ್ಯಾಮಲಾಲ್ ಪಾಂಡೆ ಅವರು ಸಲ್ಮಾನ್ ಖಾನ್ ಮತ್ತು ಅವರ ಅಂಗರಕ್ಷಕರ ವಿರುದ್ಧ ಐಪಿಸಿಯ ಸೆಕ್ಷನ್ 324, 392, 426, 506 (II), R/W34 ಅಡಿಯಲ್ಲಿ ದೂರು ದಾಖಲಿಸಿದ್ದರು.

ಪತ್ರಕರ್ತರೊಬ್ಬರ ಫೋನ್ ಕಿತ್ತುಕೊಂಡು ಆತನೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಸಲ್ಮಾನ್ ಮತ್ತು ಆತನ ಅಂಗರಕ್ಷಕನ ವಿರುದ್ಧ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರಿಗೆ ಹೊಸದಾಗಿ ಸಮನ್ಸ್ ಜಾರಿ ಮಾಡಿತ್ತು. ಇದೀಗ ಈ ವಿಚಾರವಾಗಿ ನಟ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 2019ರಿಂದ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಏ. 5ಕ್ಕೆ ಸಮನ್ಸ್ ಜಾರಿಯಾಗಿತ್ತು.

ಸಲ್ಮಾನ್ ಖಾನ್‌ಗೆ ನೀಡಿದ ಸಮನ್ಸ್ ಪ್ರಕಾರ, ಅವರು ಏ. 5ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಮುಂಬೈನ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ಸಲ್ಮಾನ್ ವಿರುದ್ಧ ದೂರು ದಾಖಲಿಸಿದ್ದರು.

ಘಟನೆ ಏನು?:ಲಿಂಕಿಂಗ್ ರಸ್ತೆಯಲ್ಲಿ ಸಲ್ಮಾನ್ ಖಾನ್ ಸೈಕ್ಲಿಂಗ್​ ಮಾಡುತ್ತಿದ್ದಾಗ ಫೋಟೋ ತೆಗೆದ ಕಾರಣಕ್ಕೆ ಪತ್ರಕರ್ತ ಶ್ಯಾಮಲಾಲ್ ಪಾಂಡೆ ಅವರ ಮೊಬೈಲ್​ ಕಿತ್ತುಕೊಂಡಿದ್ದರು. ಈ ವೇಳೆ ಸಲ್ಮಾನ್​ ಖಾನ್ ಅಂಗರಕ್ಷಕ ಬಂದು ಅನುಮತಿ ಇಲ್ಲದೇ ಫೋಟೋ ತೆಗೆದಿರುವ ಬಗ್ಗೆ ದೂರು ದಾಖಲಿಸಿದ್ದರು. ಈ ಆರೋಪದ ಬಗ್ಗೆ ಪತ್ರಕರ್ತ ಶ್ಯಾಮಲಾಲ್​ ಪಾಂಡೆ ಅನುಮತಿ ಪಡೆದ ನಂತರವೇ ಫೋಟೋ ತೆಗೆದಿದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ:ಆರ್ಥಿಕವಾಗಿ ಕಂಗೆಟ್ಟ ಶ್ರೀಲಂಕಾದಲ್ಲಿ ರಾಜಕೀಯ ಪ್ರಕ್ಷುಬ್ಧತೆ: ಅಲ್ಪಮತಕ್ಕೆ ಕುಸಿತ ಸರ್ಕಾರ!

ABOUT THE AUTHOR

...view details