ಹೈದರಾಬಾದ್:ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಬಂದೂಕು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಂಬೈ ಪೊಲೀಸ್ ಕಮಿಷನರ್ ಕಚೇರಿಗೆ ಶುಕ್ರವಾರ ತೆರಳಿದ್ದ ಬಜರಂಗಿ ಭಾಯಿಜಾನ್, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹಂತಕರಾದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಹತ್ಯೆ ಬೆದರಿಕೆ ಪತ್ರ ಬಂದಿದೆ. ಹೀಗಾಗಿ ತಮಗೆ ಬಂದೂಕು ಹೊಂದಲು ಪರವಾನಗಿ ನೀಡಬೇಕು ಎಂದು ಕೋರಿದ್ದಾರೆ.
Salman Khan applies for gun license.. ಬಂದೂಕು ಲೈಸೆನ್ಸ್ಗಾಗಿ ಬಜರಂಗಿ ಭಾಯಿಜಾನ್ ಅರ್ಜಿ - ಬಂದೂಕಿಗಾಗಿ ಸಲ್ಮಾನ್ ಅರ್ಜಿ
ತಮಗೆ ಜೀವ ಬೆದರಿಕೆ- ಬಂದೂಕು ಹೊಂದಲು ಅನುಮತಿ ನೀಡುವಂತೆ ಸಲ್ಮಾನ್ ಖಾನ್ ಮನವಿ- ಲೈಸೆನ್ಸ್ ಕೋರಿ ಪೊಲೀಸ್ ಇಲಾಖೆಗೆ ಅರ್ಜಿ
![Salman Khan applies for gun license.. ಬಂದೂಕು ಲೈಸೆನ್ಸ್ಗಾಗಿ ಬಜರಂಗಿ ಭಾಯಿಜಾನ್ ಅರ್ಜಿ ಬಂದೂಕು ಪರವಾನಗಿ ನೀಡಲು ಬಾಲಿವುಡ್ ನಟ ಸಲ್ಮಾನ್ ಖಾನ್ ಅರ್ಜಿ](https://etvbharatimages.akamaized.net/etvbharat/prod-images/768-512-15901477-thumbnail-3x2-bng.jpg)
ಬಂದೂಕು ಪರವಾನಗಿ ನೀಡಲು ಬಾಲಿವುಡ್ ನಟ ಸಲ್ಮಾನ್ ಖಾನ್ ಅರ್ಜಿ
ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಅವರ ಮನೆಗೆ ಪತ್ರವೊಂದು ಬಂದಿತ್ತು. ಅದರಲ್ಲಿ ಸಿಧು ಮೂಸೆವಾಲಾ ಅವರನ್ನು ಕೊಂದಂತೆ ನಿಮ್ಮನ್ನೂ ಹತ್ಯೆ ಮಾಡಲಾಗುವುದು ಎಂದು ಬರೆದಿತ್ತು. ಇದಾದ ಬಳಿಕ ದೂರು ನೀಡಿದ್ದ ಸಲ್ಮಾನ್ ನಿವಾಸಕ್ಕೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಸಲ್ಮಾನ್ ಬಂದೂಕು ಹೊಂದಲು ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.