ನವದೆಹಲಿ:ಚುನಾವಣಾ ಬಾಂಡ್ಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ)ನ ಕೆಲವು ನಿಗದಿತ ಬ್ಯಾಂಕ್ಗಳ ಮೂಲಕ ಬಾಂಡ್ಗಳನ್ನು ನಗದು ಆಗಿ ಪರಿವರ್ತನೆ ಮಾಡಿಕೊಳ್ಳಬಹುದಾಗಿದೆ.
ಈ ವರ್ಷದ ಅಕ್ಟೋಬರ್ 1ರಿಂದ ಅಕ್ಟೋಬರ್ 10ರವರೆಗೆ ಅವಕಾಶ ಕೆಲವು ಬ್ಯಾಂಕ್ಗಳಲ್ಲಿ ಚುನಾವಣಾ ಬಾಂಡ್ಗಳನ್ನು ಮಾರಾಟ ಮಾಡಬಹುದಾಗಿದೆ. ರಾಜಕೀಯ ಪಕ್ಷಗಳು ತಮಗೆ ಬಂದಿರುವ ಚುನಾವಣಾ ಬಾಂಡ್ಗಳನ್ನು ಈ ದಿನಾಂಕದೊಳಗೆ ಮಾರಾಟ ಮಾಡಬಹುದಾಗಿದೆ.
2018ರಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜಕೀಯ ಪಕ್ಷಗಳಿಗೆ ನೇರವಾಗಿ ಹಣ, ದೇಣಿಗೆ ನೀಡುವುದನ್ನು ತಪ್ಪಿಸಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ವ್ಯಕ್ತಿಗಳು ಬಾಂಡ್ಗಳ ಮೂಲಕ ದೇಣಿಗೆ ನೀಡಬಹುದಾಗಿತ್ತು.