ಕರ್ನಾಟಕ

karnataka

By

Published : Oct 18, 2021, 8:33 PM IST

ETV Bharat / bharat

ಏರ್​ ಇಂಡಿಯಾ ಮಾರಾಟವು ಮಹತ್ವದ ಮೈಲಿಗಲ್ಲಾಗಿದೆ: ಐಎಂಎಫ್​ ಬಣ್ಣನೆ

ಸರ್ಕಾರಿ ಸ್ವಾಮ್ಯದಲ್ಲಿದ್ದ ಏರ್ ಇಂಡಿಯಾ ವಿಮಾನ ಸಂಸ್ಥೆ ಮಾರಾಟ ಮಾಡಿರುವುದು ಮಹತ್ವದ ಮೈಲಿಗಲ್ಲು ಎಂದು ಐಎಂಎಫ್ ಬಣ್ಣಿಸಿದೆ.

ಏರ್ ಇಂಡಿಯಾ
ಏರ್ ಇಂಡಿಯಾ

ನವದೆಹಲಿ:ಭಾರತದ ಸರ್ಕಾರಿ ಸ್ವಾಮ್ಯದಲ್ಲಿದ್ದ ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸಿರುವ ಬಗ್ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಪ್ರತಿಕ್ರಿಯೆ ನೀಡಿದ್ದು, ಇದೊಂದು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದೆ.

ಏರ್ ಇಂಡಿಯಾದ ಮಾರಾಟ ಭಾರತದ ಖಾಸಗೀಕರಣದ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಐಎಂಎಫ್-ಎಸ್ಟಿಐ ಪ್ರಾದೇಶಿಕ ತರಬೇತಿ ಸಂಸ್ಥೆಯ ನಿರ್ದೇಶಕ ಮತ್ತು ಮಾಜಿ ಐಎಂಎಫ್ ಇಂಡಿಯಾ ಮಿಷನ್ ಮುಖ್ಯಸ್ಥ ಆಲ್ಫ್ರೆಡ್ ಶಿಪ್ಕೆ ಹೇಳಿದ್ದಾರೆ.

ಅಕ್ಟೋಬರ್ 11 ರಂದು ಟಾಟಾ ಗ್ರೂಪ್​, ಏರ್​ ಇಂಡಿಯಾವನ್ನು ಖರೀದಿಸಿದ್ದು, ಲೆಟರ್​ ಆಫ್​ ಇಂಟೆಂಟ್ ​ಅನ್ನು ಹಸ್ತಾಂತರಿಸಲಾಗಿದೆ. "ಏರ್ ಇಂಡಿಯಾ ಮಾರಾಟ ಮಾಡಿದ ಭಾರತದ ನಡೆಯನ್ನು ನಾವು ಸ್ವಾಗತಿಸುತ್ತೇವೆ, ಇದು ಪ್ರಮುಖ ಮೈಲಿಗಲ್ಲಾಗಿದೆ" ಎಂದು ಅಲ್ಫರ್ಡ್ ಶಿಪ್ಕೆ ಅಭಿಪ್ರಾಯಪಟ್ಟಿದ್ದಾರೆ.

15,300 ಕೋಟಿ ರೂಪಾಯಿ ಸಾಲದ ಹೊರೆಯೊಂದಿಗೆ 2,700 ಕೋಟಿ ರೂಪಾಯಿ ಹಣ ನೀಡಿ ಟಾಟಾ ಹರಾಜು ಪ್ರಕ್ರಿಯೆಯಲ್ಲಿ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿತ್ತು.

ಸಾಮಾನ್ಯವಾಗಿ ಖಾಸಗೀಕರಣದ ಫಲವನ್ನು ಹೆಚ್ಚಿಸುವುದಕ್ಕೆ ಅಂತಾರಾಷ್ಟ್ರೀಯ ಅನುಭವದಲ್ಲಿ ಮಧ್ಯಮ ಅವಧಿಯ ಖಾಸಗೀಕರಣ ಯೋಜನೆಗಳನ್ನು, ಘನ ನಿಯಂತ್ರಕ ಚೌಕಟ್ಟುಗಳು, ಸ್ಪರ್ಧಾತ್ಮಕ ಮಾರುಕಟ್ಟೆಗಳು ಮತ್ತು ಪ್ರಮುಖ ಪಾಲುದಾರರ ಖರೀದಿಗಳನ್ನು ಹೈಲೈಟ್ ಮಾಡಲಾಗುತ್ತದೆ ಎಂದು ಶಿಪ್ಕೆ ಹೇಳಿದ್ದಾರೆ.

ಇದನ್ನೂ ಓದಿ: ಕಾರು ಪ್ರಿಯರಿಗೆ ಟಾಟಾ 'ಪಂಚ್‌'.. ಕೇವಲ ₹5.49 ಲಕ್ಷಕ್ಕೆ 5 ಸ್ಟಾರ್ ಸೇಫ್ಟಿ ವೆಹಿಕಲ್‌ ..

ABOUT THE AUTHOR

...view details