ಶಿರಡಿ: ಮೊದಲ ದಿನದ ಗುರುಪೂರ್ಣಿಮೆ ಆಚರಣೆ ಭಕ್ತಿ ಭಾವದಿಂದ ಜರುಗಿದೆ. ಇಂದು ಬೆಳಗ್ಗೆ ಕಾಕಡ ಆರತಿಯ ನಂತರ ಸಾಯಿ ಮಂದಿರದಿಂದ ಸಾಯಿ ಪ್ರತಿಮೆಗಳು, ವೀಣೆ ಮತ್ತು ಸಾಯಿ ಸಚ್ಚರಿತ್ರ ಗ್ರಂಥಗಳನ್ನು ಮೆರವಣಿಗೆ ಮಾಡಲಾಯಿತು.
ಅಖಂಡ ಪಾರಾಯಣ ಪಠಣದೊಂದಿಗೆ ಗುರುಪೂರ್ಣಿಮ ಹಬ್ಬ ನಡೆದಿದೆ. ಈ ವೇಳೆ, ಕಣ್ಣುಕುಕ್ಕುವ ಆಕರ್ಷಕ ವಿದ್ಯುತ್ ದೀಪಾಲಂಕಾರವನ್ನು ದೇವಾಲಯಕ್ಕೆ ಮಾಡಲಾಗಿತ್ತು.
ಶಿರಡಿಯಲ್ಲಿ 13 ಜುಲೈ 1908 ರಂದು ಪ್ರಾರಂಭವಾದ ಸಾಯಿಬಾಬಾ ಅವರ ಗುರುಪೂರ್ಣಿಮೆ ಆಚರಣೆಗಳು ನೂರು ವರ್ಷಗಳ ಗತಕಾಲದ ಸಂಪ್ರದಾಯ ಹೊಂದಿದೆ. ವಿಶೇಷವಾಗಿ ಗುರುಪೂರ್ಣಿಮೆಯಂದು ಸಾಯಿಬಾಬಾ ಅವರ ದರ್ಶನ ಪಡೆಯಲು ಅನೇಕ ಭಕ್ತರು ಶಿರಡಿಗೆ ಬರುತ್ತಾರೆ.
ಶಿರಡಿಯಲ್ಲಿ ಸಾಯಿಬಾಬಾರ 115 ನೇ ಗುರು ಪೂರ್ಣಿಮೆ ಅದ್ಧೂರಿ ಆಚರಣೆ ಗುರುಪೂರ್ಣಿಮೆ ಅಂದರೆ ಸಾಮಾನ್ಯವಾಗಿ ಎಲ್ಲ ಕಡೆ ಒಂದು ದಿನ ಇರುತ್ತದೆ. ಆದರೆ, ಶಿರಡಿಯಲ್ಲಿ ಗುರುಪೂರ್ಣಿಮೆಯನ್ನು ಮೂರು ದಿನಗಳ ಕಾಲ ಆಚರಿಸುವ ವಿಶಿಷ್ಟ ಸಂಪ್ರದಾಯವಿದೆ. ಗುರುಪೂರ್ಣಿಮೆ ಮೊದಲ ದಿನದಂದು ಶಿರಡಿಯ ಸಾಯಿಬಾಬಾ ದೇವಾಲಯದಲ್ಲಿ ಕಾಕಡ ಆರತಿಯ ನಂತರ, ಎಲ್ಲ ಕಾರ್ಯಗಳು ನಡೆಯುತ್ತವೆ.
ಈ ವರ್ಷ ಮೆರವಣಿಗೆಯಲ್ಲಿ ಸಂಸ್ಥಾನದ ಟ್ರಸ್ಟಿಗಳಾದ ಡಾ.ಏಕನಾಥ್ ಗೊಂಡ್ಕರ್, ಸಚಿನ್ ಕೋಟೆ, ಡಾ.ಜಲೀಂದರ್ ಭೋರ್ ಮತ್ತು ಸುನೀಲ್ ಶೆಲ್ಕೆ ಭಾಗವಹಿಸಿದ್ದಾರೆ.
ಇದನ್ನೂ ಓದಿ: 12 ವರ್ಷಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಮಾಡೆಲ್!