ಕರ್ನಾಟಕ

karnataka

ETV Bharat / bharat

ಧನು ರಾಶಿಯವರಿಗೆ ವರ್ಷದ ಪ್ರಾರಂಭದಿಂದಲೇ ಹಣಕಾಸಿನ ವಿಚಾರದಲ್ಲಿ ಒಳ್ಳೆಯ ಅವಕಾಶಗಳು ಕೂಡಿ ಬರಲಿವೆ

2022ರಲ್ಲಿ ಧನು ರಾಶಿಯವರಿಗೆ ವರ್ಷದ ಪ್ರಾರಂಭದಿಂದಲೇ ಹಣಕಾಸಿನ ವಿಚಾರದಲ್ಲಿ ನಿಮಗೆ ಕೆಲವು ಒಳ್ಳೆಯ ಅವಕಾಶಗಳು ಕೂಡಿ ಬರಲಿವೆ. ವೃತ್ತಿಯ ವಿಚಾರದಲ್ಲಿ ಈ ವರ್ಷವು ನಿಮಗೆ ಶುಭಕರವಾಗಿರಲಿದೆ. ನಿಮ್ಮ ಒಡಹುಟ್ಟಿದವರ ಜೊತೆಗಿನ ಸಂಬಂಧವು ಚೆನ್ನಾಗಿರಲಿದೆ.

Sagittarius Yearly Horoscope Prediction 2022
Sagittarius Yearly Horoscope Prediction 2022

By

Published : Jan 1, 2022, 1:43 PM IST

ಧನು ರಾಶಿಯವರಿಗೆ ತಮ್ಮನ್ನು ತಾವು ಅರಿತುಕೊಳ್ಳಲು 2022ರಲ್ಲಿ ಅವಕಾಶ ಒದಗಿ ಬರಲಿದೆ. ಏಕೆಂದರೆ ಈ ವರ್ಷದಲ್ಲಿ ನೀವು ಸಾಕಷ್ಟು ಪ್ರಯಾಣ ಮಾಡಲಿದ್ದೀರಿ. ಈ ವರ್ಷದ ಅತ್ಯುತ್ತಮ ಬದಲಾವಣೆ ಎಂದರೆ ನಿಮ್ಮ ಏಳೂವರೆ ವರ್ಷದ ಶನಿಯ ಪ್ರಭಾವ ಈ ಬಾರಿ ಮುಕ್ತಾಯಗೊಳ್ಳಲಿದೆ.

ಧನು ರಾಶಿಯವರಿಗೆ ತಮ್ಮನ್ನು ತಾವು ಅರಿತುಕೊಳ್ಳಲು 2022ರಲ್ಲಿ ಅವಕಾಶ ಒದಗಿ ಬರಲಿದೆ

ಕಳೆದ ಅನೇಕ ವರ್ಷಗಳಲ್ಲಿ ಮಾಡಲಾಗದ ಕೆಲಸವು ಈ ಬಾರಿ ಪೂರ್ಣಗೊಳ್ಳಲಿದೆ. ನೀವು ಹೊಸ ಸ್ಥಳಗಳಿಗೆ ಪ್ರಯಾಣಿಸಲಿದ್ದೀರಿ. ತುಂಬಾ ಆಸಕ್ತಿಕರ ಎನಿಸುವ ಯಾವುದಾದರೂ ಸ್ಥಳಕ್ಕೆ ನೀವು ಹೋಗಲಿದ್ದೀರಿ. ನೀವು ಸಾಹಸವನ್ನು ಇಷ್ಟಪಡಲಿದ್ದೀರಿ. ವರ್ಷದ ಪ್ರಾರಂಭದಿಂದಲೇ ಹಣಕಾಸಿನ ವಿಚಾರದಲ್ಲಿ ನಿಮಗೆ ಕೆಲವು ಒಳ್ಳೆಯ ಅವಕಾಶಗಳು ಕೂಡಿ ಬರಲಿವೆ. ಇದನ್ನು ನೀವು ಕಳೆದು ಕೊಳ್ಳುವುದು ತರವಲ್ಲ. ಹೀಗಾಗಿ ಇವುಗಳಿಗೆ ಅಗತ್ಯ ಗಮನ ನೀಡಿರಿ.

ನೀವು ನಿಮ್ಮ ತಾಯಿಯ ಬೆಂಬಲವನ್ನು ಪಡೆಯಲಿದ್ದೀರಿ. ಗುರುವು ಏಪ್ರಿಲ್‌ ತಿಂಗಳಿನಲ್ಲಿ ತಮ್ಮ ಮನೆಯನ್ನು ಬದಲಾಯಿಸಲಿದ್ದು, ನಿಮ್ಮ ಸಂತೃಪ್ತಿಯ ಸ್ಥಾನಕ್ಕೆ ತಲುಪಲಿದ್ದಾನೆ. ಹೊಸ ಭೂಮಿ, ಮನೆ ಅಥವಾ ವಾಹನವನ್ನು ಖರೀದಿಸಲು ನೀವು ಯೋಜಿಸಲಿದ್ದೀರಿ. ವೃತ್ತಿಯ ವಿಚಾರದಲ್ಲಿ ಈ ವರ್ಷವು ನಿಮಗೆ ಶುಭಕರವಾಗಿರಲಿದೆ. ನಿಮ್ಮ ಒಡಹುಟ್ಟಿದವರ ಜೊತೆಗಿನ ಸಂಬಂಧವು ಚೆನ್ನಾಗಿರಲಿದೆ. ಮೆಲ್ಲನೆ ಭಿನ್ನಾಭಿಪ್ರಾಯಗಳು ದೂರಗೊಳ್ಳಲಿವೆ.

ಈ ರಾಶಿಯ ಜನರು ಈ ವರ್ಷದಲ್ಲಿ ವಿದೇಶ ಪ್ರಯಾಣದ ಕುರಿತು ಅದ್ಭುತ ಯಶಸ್ಸನ್ನು ಪಡೆಯಲಿದ್ದಾರೆ. ಇದಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದವರು ಹಾಗೂ ಈ ವಿಚಾರದಲ್ಲಿ ಮುಂದುವರಿಯಲು ಇಚ್ಛಿಸುವವರು ವರ್ಷದ ಮಧ್ಯಭಾಗಕ್ಕೆ ಮೊದಲೇ ಹೊರಗೆ ಹೋಗಲು ಅವಕಾಶ ಪಡೆಯಲಿದ್ದಾರೆ.

ಅಧ್ಯಯನದ ವಿಚಾರದಲ್ಲಿ ವಿದ್ಯಾರ್ಥಿಗಳು ಒಂದಷ್ಟು ಹೆಚ್ಚಿನ ಪ್ರಯತ್ನ ಮಾಡಬೇಕಾದೀತು. ಏಪ್ರಿಲ್‌ ತಿಂಗಳಿನಲ್ಲಿ ಉಂಟಾಗುವ ರಾಹು ಮತ್ತು ಕೇತುವಿನ ಸ್ಥಾನ ಬದಲಾವಣೆಯು ನಿಮ್ಮ ಪಾಲಿಗೆ ಹೊಸ ಬದಲಾವಣೆಯನ್ನು ತರಲಿದೆ. ವಿದ್ಯಾರ್ಥಿಗಳು ಯಶಸ್ಸು ಪಡೆಯಬೇಕಾದರೆ ಕಠಿಣ ಶ್ರಮ ಪಡುವ ಅಗತ್ಯವಿದೆ.

ಈ ವರ್ಷದಲ್ಲಿ ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ನಿಮ್ಮ ವರ್ತನೆಯ ಮೇಲೆ ಒಂದಷ್ಟು ನಿಗಾ ವಹಿಸುವ ಅಗತ್ಯವಿದೆ. ನಿಮಗೆ ಮಕ್ಕಳ ಕುರಿತ ಕಳವಳ ಕಾಡಬಹುದು. ಆದಾಯವು ಕಡಿಮೆ ಇದ್ದು ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ, ಇದನ್ನು ನಿಭಾಯಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಈ ವರ್ಷದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಾಕಷ್ಟು ಸಂಪರ್ಕವನ್ನು ಸಾಧಿಸಲಿದ್ದೀರಿ. ಹೀಗೆ ಈ ವರ್ಷವು ನಿಮಗೆ ಅನೇಕ ಹೊಸ ಅನುಭವಗಳನ್ನು ನೀಡಲಿದೆ.

ಇದನ್ನೂ ಓದಿ: Horoscope-2022: ಹೊಸ ವರ್ಷ ಯಾವ ರಾಶಿಯವರಿಗೆ ಅದೃಷ್ಟ, ಹೇಗಿರಲಿದೆ ನಿಮ್ಮ ಭವಿಷ್ಯ?

ABOUT THE AUTHOR

...view details