ಸಾಗರ( ಮಧ್ಯಪ್ರದೇಶ): ಸೋದರ ಸಂಬಂಧಿಯ ಸಾವಿನಿಂದ ಆಘಾತಕ್ಕೊಳಗಾದ ಸಹೋದರನೊಬ್ಬ ಚಿತೆಗೆ ಹಾರಿ ಪ್ರಾಣ ಬಿಟ್ಟ ಆಘಾತಕಾರಿ ಪ್ರಕರಣ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ. ಬಹೇರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮಜ್ಗವಾನ್ ಗ್ರಾಮದಲ್ಲಿ ಸೋದರ ಸಂಬಂಧಿಯ ಜ್ಯೋತಿ ಅಲಿಯಾಸ್ ಪ್ರೀತಿ ಎಂಬುವವರು ಮೃತಪಟ್ಟಿದ್ದರು. ಅವರ ಚಿತೆಯಲ್ಲಿ ಇವರ ಸಹೋದರ ಸಂಬಂಧಿಯೊಬ್ಬ ಚಿತೆಯಲ್ಲಿ ಹಾರಿದ್ದರು.
ಈ ವೇಳೆ ಅಲ್ಲಿದ್ದ ಗ್ರಾಮಸ್ಥರು ಇನ್ನೂ ಉಸಿರಾಡುತ್ತಿದ್ದ ಇವರನ್ನ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ದಾರಿ ಮಧ್ಯೆದಲ್ಲೇ ಅವರು ಅಸುನೀಗಿದ್ದಾರೆ. ಸಹೋದರನ ಚಿತೆಗೆ ಹಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಸಾಗರ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ: ತಮ್ಮ ಹೊಲಕ್ಕೆ ಹೋಗಿದ್ದ ಪ್ರೀತಿ ಡಂಗಿ ಎಂಬುವವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಸಾಕಷ್ಟು ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ ಗ್ರಾಮದ ಬಾವಿಯಲ್ಲಿ ಪ್ರೀತಿ ಶವವಾಗಿ ಪತ್ತೆಯಾಗಿದ್ದರು. ಮರುದಿನ ಶನಿವಾರ ಮೃತಪಟ್ಟ ಪ್ರೀತಿಯ ಅಂತ್ಯ ಸಂಸ್ಕಾರ ನಡೆದಿತ್ತು. ಮೃತ ಪ್ರೀತಿಯ ಚಿಕ್ಕಪ್ಪ ಉದಯ್ ಸಿಂಗ್ ಅವರ ಮಗ ಕರಣ್ (21) ಧರ್ ಮಜ್ಗವಾನ್‌ನಲ್ಲಿರುವ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಶ್ಮಸಾನಕ್ಕೆ ಆಗಮಿಸಿದ್ದ, ಈ ವೇಳೆ ತನ್ನ ಅಕ್ಕನ ಸಾವಿನಿಂದ ಆಘಾತಕ್ಕೊಳಗಾಗಿದ್ದ ಕರಣ್, ಉರಿಯುವ ಚಿತೆಗೆ ಹಾರಿದ್ದ.