ಭೋಪಾಲ್(ಮಧ್ಯಪ್ರದೇಶ): ಸದಾ ಒಂದಿಲ್ಲೊಂದು ರೀತಿಯ ವಿವಾದಿತ ಹೇಳಿಕೆ ನೀಡಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಇದೀಗ ಮತ್ತೊಮ್ಮೆ ತಮ್ಮ ಬಾಯಿ ಹರಿ ಬಿಡುವ ಮೂಲಕ ಪೇಚಿಗೆ ಸಿಲುಕಿಕೊಂಡಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್, ನನಗೆ ಕೋವಿಡ್ ಸೋಂಕು ಬರಲ್ಲ. ಯಾಕೆಂದ್ರೆ ನಾನು ಹಸುವಿನ ಮೂತ್ರ ಕುಡಿಯುತ್ತೇನೆ ಜತೆಗೆ ನಿರಂತರವಾಗಿ ದೇವರ ಪೂಜೆ ಮಾಡುತ್ತೇನೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ, ಈ ಹೇಳಿಕೆ ನೀಡಿ ಸಾಧ್ವಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ಇದೀಗ ಸಂಸದೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ ನಿತ್ಯ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದ್ದರೂ, ಸಾಧ್ವಿ ಕಾಣಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ.