ಹರಿದ್ವಾರ(ಉತ್ತರಾಖಂಡ್): ಕಾಲಕ್ಕೆ ತಕ್ಕಂತೆ ದೇಶವೂ ಬದಲಾಗುತ್ತಿದೆ. ಜನರು ನಿಧಾನವಾಗಿ ಆಧುನಿಕತೆಯತ್ತ ಸಾಗುತ್ತಿದ್ದಾರೆ. ಧರ್ಮನಗರಿಯ ಸಂತರು ಸಂತರೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಮಠ ಮಂದಿರಗಳಲ್ಲಿ ನಡೆಯುವ ಋಷಿಮುನಿಗಳ ಸಭೆಗಳು ಈಗ ಹರಿದ್ವಾರದ ಐಷಾರಾಮಿ ಹೋಟೆಲ್‌ಗಳಲ್ಲಿ ನಡೆಯುತ್ತಿವೆ. ಇದಕ್ಕೆ ಇಂಬು ನೀಡುವಂತೆ ಋಷಿ ಮುನಿಗಳು ನಡೆಸಿದ ಸಭೆಯ ಫೋಟೋಗಳು ಈಗ ವೈರಲ್ ಆಗಿ ಹಲ್- ಚಲ್ ಸೃಷ್ಟಿಸಿವೆ.
ಋಷಿಮುನಿಗಳು ಮತ್ತು ಸಂತರೂ ಸಹ ಆಧುನಿಕ ಜಗತ್ತಿಗೆ ಹೊಂದಿಕೊಳ್ಳಲು ಪ್ರಾರಂಭಿಸಿದ್ದಾರೆ. ಏಕೆಂದರೆ ಇಂದು ಅಖಿಲ ಭಾರತೀಯ ಅಖಾರ ಪರಿಷತ್ತಿನ ಎಲ್ಲ ಪಂಗಡಗಳ ಸಂತರು ಚಾರ್ಧಾಮ ಯಾತ್ರೆ ಯಶಸ್ವಿಗೊಳಿಸುವ ಸಲುವಾಗಿ ಹರಿದ್ವಾರದಲ್ಲಿ ಸಭೆ ಸೇರಿದ್ದರು. ಸಭೆ ಸೇರಿದ್ದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಹರಿದ್ವಾರದ ಐಷಾರಾಮಿ ಹೋಟೆಲ್ ಕ್ಲಾಸಿಕ್ ರೆಸಿಡೆನ್ಸಿಯಲ್ಲಿ ಸಭೆ ನಡೆಸಿ ಗಮನ ಸೆಳೆದಿದ್ದಾರೆ. ಚಾರ್ಧಾಮ್ ಯಾತ್ರೆಯನ್ನು ಯಶಸ್ವಿಗೊಳಿಸಲು ಸಾಧು - ಸಂತರು ಸಭೆಯನ್ನೇನೋ ನಡೆಸಿದ್ದಾರೆ. ಆದರೆ ಸಭೆಯಲ್ಲಿದ್ದ ಸಂತರ ಫೋಟೋಗಳು ತೀವ್ರಗತಿಯಲ್ಲಿ ವೈರಲ್ ಆಗಿ ದೇಶದ ಜನರ ಗಮನ ಸೆಳೆಯುತ್ತಿವೆ.
ಸಾಧು ಸಂತರ ಬದುಕನ್ನೇ ಬದಲಿಸಿದ ಸಾಮಾಜಿಕ ಮಾಧ್ಯಮ: ಇಂದಿನ ದಿನಗಳಲ್ಲಿ ಎಲ್ಲರೂ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ವಿಚಾರಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಋಷಿಮುನಿಗಳೂ ಈ ಆಧುನಿಕ ಸಾಮಾಜಿಕ ಮಾಧ್ಯಮದಿಂದ ಹಿಂದೆ ಬಿದ್ದಿಲ್ಲ. ಸಾಧು -ಸಂತರು ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡುತ್ತಿದ್ದು, ತಮ್ಮ ಫೋಟೋಗಳನ್ನ ಮತ್ತು ವಿಡಿಯೋಗಳನ್ನು ಟ್ವಿಟರ್, ಫೇಸ್ಬುಕ್ ಹಾಗೂ ಇನ್ನಿತರ ಆ್ಯಪ್ಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ.