ನವದೆಹಲಿ :ಉತ್ತರಪ್ರದೇಶದ ಮಾಜಿ ಸಿಎಂ ಕಲ್ಯಾಣ್ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ನನ್ನ ದುಃಖವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಕಲ್ಯಾಣ್ ಸಿಂಗ್ ರಾಜ್ಯಪಾಲ ಮತ್ತು ಹಿರಿಯ ಆಡಳಿತಗಾರರಾಗಿದ್ದರು ಎಂದು ಮೋದಿ ಬಣ್ಣಿಸಿದ್ದಾರೆ.
ಸಮಾಜದ ಹಿಂದುಳಿದ ವರ್ಗಗಳ ಕೋಟ್ಯಂತರ ಮಂದಿಗೆ ಧ್ವನಿಯಾಗಿದ್ದರು ಕಲ್ಯಾಣ್ ಸಿಂಗ್ : ಮೋದಿ ಸಂತಾಪ - ಕಲ್ಯಾಣ್ ಸಿಂಗ್ ನಿಧನಕ್ಕೆ ಮೋದಿ ಸಂತಾಪ
ಕಲ್ಯಾಣ್ ಸಿಂಗ್ ಅವರು ನೀಡಿದ ಕೊಡುಗೆಗಳಿಗಾಗಿ ಮುಂಬರುವ ಪೀಳಿಗೆ ಶಾಶ್ವತವಾಗಿ ಕೃತಜ್ಞರಾಗಿರುತ್ತದೆ. ಅವರು ಭಾರತೀಯ ಮೌಲ್ಯಗಳನ್ನು ದೃಢವಾಗಿ ಅಳವಡಿಸಿಕೊಂಡಿದ್ದರು. ನಮ್ಮ ಹಳೆಯ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡುತ್ತಿದ್ದರು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ..
![ಸಮಾಜದ ಹಿಂದುಳಿದ ವರ್ಗಗಳ ಕೋಟ್ಯಂತರ ಮಂದಿಗೆ ಧ್ವನಿಯಾಗಿದ್ದರು ಕಲ್ಯಾಣ್ ಸಿಂಗ್ : ಮೋದಿ ಸಂತಾಪ Saddened beyond words: PM Modi on Kalyan Singh](https://etvbharatimages.akamaized.net/etvbharat/prod-images/768-512-12841538-thumbnail-3x2-kodagu.jpg)
ಸಮಾಜದ ಹಿಂದುಳಿದ ವರ್ಗಗಳ ಕೋಟ್ಯಂತರ ಮಂದಿಗೆ ಧ್ವನಿಯಾಗಿದ್ದರು ಕಲ್ಯಾಣ್ ಸಿಂಗ್: ಮೋದಿ ಸಂತಾಪ
ಉತ್ತರಪ್ರದೇಶದ ಅಭಿವೃದ್ಧಿಗೆ ಅವರು ಮರೆಯಲಾಗದ ಕೊಡುಗೆ ನೀಡಿದ್ದಾರೆ. ಕಲ್ಯಾಣ್ ಸಿಂಗ್ ಅವರು ಸಮಾಜದಲ್ಲಿರುವ ಹಿಂದುಳಿದ ವರ್ಗಗಳ ಕೋಟ್ಯಂತರ ಜನರಿಗೆ ಧ್ವನಿಯಾಗಿದ್ದರು. ರೈತರು, ಯುವಕರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಪ್ರಯತ್ನಗಳನ್ನು ಮಾಡಿದ್ದರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕಲ್ಯಾಣ್ ಸಿಂಗ್ ಅವರು ನೀಡಿದ ಕೊಡುಗೆಗಳಿಗಾಗಿ ಮುಂಬರುವ ಪೀಳಿಗೆ ಶಾಶ್ವತವಾಗಿ ಕೃತಜ್ಞರಾಗಿರುತ್ತದೆ. ಅವರು ಭಾರತೀಯ ಮೌಲ್ಯಗಳನ್ನು ದೃಢವಾಗಿ ಅಳವಡಿಸಿಕೊಂಡಿದ್ದರು. ನಮ್ಮ ಹಳೆಯ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡುತ್ತಿದ್ದರು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.