ಮುಂಬೈ(ಮಹಾರಾಷ್ಟ್ರ):ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಸದಾ ಒಂದಿಲ್ಲೊಂದು ಕುತೂಹಲಕಾರಿ ವಿಡಿಯೋವನ್ನು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡ್ತಿರುತ್ತಾರೆ. ಸದ್ಯ ಅಂತಹದ್ದೇ ಹಳೆಯ ವಿಡಿಯೋ ತುಣುಕೊಂದನ್ನು ಅವರು ಶೇರ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಕಾಣುವ ಹಾಗೆ, ಇಬ್ಬರು ಮಕ್ಕಳು ಕ್ರಿಕೆಟ್ ಆಡುತ್ತಿದ್ದಾರೆ. ಇದರಲ್ಲಿ ಶ್ವಾನ ವಿಕೆಟ್ ಕೀಪಿಂಗ್ (Dog playing cricket) ಜೊತೆಗೆ, ಬಾಲ್ ಹುಡುಕಿಕೊಂಡು ತಂದು ಕೊಡುವ ಕೆಲಸ ಮಾಡ್ತಿದೆ. ವಿಕೆಟ್ ಕೀಪಿಂಗ್ ವೇಳೆ ಶ್ವಾನ ಚುರುಕಾಗಿ ತನ್ನ ಬಾಯಲ್ಲಿ ಬಾಲ್ ಹಿಡಿದುಕೊಳ್ಳುತ್ತಿದೆ. ಈ ವಿಡಿಯೋ ಶೇರ್ ಮಾಡಿರುವ ಸಚಿನ್, ನನ್ನ ಸ್ನೇಹಿತ ಈ ವಿಡಿಯೋ ಕಳುಹಿಸಿಕೊಟ್ಟಿದ್ದಾನೆ. ಶ್ವಾನದ ಕೌಶಲ್ಯ ನಿಜಕ್ಕೂ ಮೆಚ್ಚುವಂಥದ್ದು. ನಾವು ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ಗಳು, ಫೀಲ್ಡರ್ಗಳು ಮತ್ತು ಆಲ್ರೌಂಡರ್ಗಳು ಈ ರೀತಿಯಾಗಿ ಬಾಲ್ ಹಿಡಿಯುವುದನ್ನು ನೋಡುತ್ತೇವೆ. ಆದರೆ ನೀವಿದಕ್ಕೆ ಏನು ಹೆಸರಿಡುತ್ತೀರಿ? ಎಂದು ಕೇಳಿದ್ದಾರೆ.