ಕರ್ನಾಟಕ

karnataka

ETV Bharat / bharat

'ಮಿಷನ್​ ಆಕ್ಸಿಜನ್​​': ಕೋವಿಡ್​ ವಿರುದ್ಧ ಹೋರಾಟಕ್ಕೆ 1 ಕೋಟಿ ರೂ.ದೇಣಿಗೆ ನೀಡಿದ ಸಚಿನ್​ - ನಟ ಸುನಿಲ್ ಶೆಟ್ಟಿ

ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಅನೇಕರು ಭಾಗಿಯಾಗುತ್ತಿದ್ದು, ಇದೀಗ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಹಾಗೂ ನಟ ಸುನಿಲ್ ಶೆಟ್ಟಿ ಸಹಾಯಹಸ್ತ ಚಾಚಿದ್ದಾರೆ.

Sachin Tendulkar
Sachin Tendulkar

By

Published : Apr 29, 2021, 9:43 PM IST

ನವದೆಹಲಿ:ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಕೆಲವೊಂದು ರಾಜ್ಯಗಳಲ್ಲಿ ಆಕ್ಸಿಜನ್​ ಸಮಸ್ಯೆ ಉದ್ಭವವಾಗಿದೆ. ಇದರ ಮಧ್ಯೆ ಅನೇಕರು ಕೈಲಾದ ಸಹಾಯ ಮಾಡ್ತಿದ್ದು, ಇದೀಗ ಕ್ರಿಕೆಟ್ ದೇವರು ಸಚಿನ್ ಕೂಡ ದೇಣಿಗೆ ನೀಡಿದ್ದಾರೆ.

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡಿರುವ ಸಚಿನ್ ತೆಂಡೂಲ್ಕರ್​ ಮಿಷನ್​ ಆಕ್ಸಿಜನ್​​ಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. 250ಕ್ಕೂ ಯುವ ಉದ್ಯಮಿಗಳ ಗುಂಪು ಆಕ್ಸಿಜನ್​ ಸಾಂದ್ರಕ ಆಮದು ಮಾಡಿಕೊಳ್ಳಲು ಹಾಗೂ ದೇಶಾದ್ಯಂತ ಇರುವ ಆಸ್ಪತ್ರೆಗಳಿಗೆ ದಾನ ಮಾಡುವ ಉದ್ದೇಶದಿಂದ ಮಿಷನ್​ ಆಕ್ಸಿಜನ್​ ಪ್ರಾರಂಭಿಸಿದ್ದಾರೆ.

ಈಗಾಗಲೇ ಬ್ರೆಟ್ ಲೀ, ಪ್ಯಾಟ್ ಕಮ್ಮಿನ್ಸ್​ ಹಾಗೂ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತಮ್ಮ ಕೈಲಾದ ಸಹಾಯ ಮಾಡಿ, ಕೊರೊನಾ ಹೋರಾಟದಲ್ಲಿ ಭಾಗಿಯಾಗಿದ್ದಾರೆ.

ಸಹಾಯ ಹಸ್ತ ಚಾಚಿದ ಸುನಿಲ್ ಶೆಟ್ಟಿ

ಕೆವಿಎನ್​ ಪ್ರತಿಷ್ಠಾನದ ಜೊತೆಗೊಡಿ ಆಕ್ಸಿಜನ್​ ಕಾನ್​​ಸಸ್ಟ್ರೆಟರ್​​ಗಳನ್ನ ಉಚಿತವಾಗಿ ಬಿಪಿಎಲ್​ ಕುಟುಂಬಗಳಿಗೆ ನೀಡಲು ನಿರ್ಧಾರ ಕೈಗೊಂಡಿದ್ದಾರೆ. ಇದು ನಮ್ಮೆಲ್ಲರಿಗೂ ಪರೀಕ್ಷೆ ಕಾಲ. ಈ ಸಂದರ್ಭದಲ್ಲಿ ಜನರು ಪರಸ್ಪರ ಸಹಾಯ ಮಾಡುತ್ತಿದ್ದು, ಉಚಿತವಾಗಿ ಆಕ್ಸಿಜನ್​ ಕಾನ್​​ಸನ್ಟ್ರೆಟರ್​ಗಳನ್ನ ನೀಡುತ್ತಿರುವ ಅಭಿಯಾನಕ್ಕೆ ಭಾಗಿಯಾಗುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ನನ್ನ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ವಿನಂತಿ ಮಾಡಿದ್ದು, ತಮಗೆ ಸಹಾಯ ಬೇಕಾದಲ್ಲಿ ಸಂದೇಶ ರವಾನೆ ಮಾಡುವಂತೆ ಕೇಳಿಕೊಂಡಿದ್ದಾರೆ.

ABOUT THE AUTHOR

...view details