ಜೈಪುರ (ರಾಜಸ್ಥಾನ): ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್ ಅವರ ಶೀತಲ ಸಮರ ಮುಂದುವರಿದಿದೆ. ಈ ಮಧ್ಯೆಯೇ ಥಾರ್ ಮರುಭೂಮಿಯಲ್ಲಿ ಹಾಕಲಾಗಿರುವ ಒಂದು ಪೋಸ್ಟರ್ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪೈಲಟ್ ಯಾವ ರೀತಿ ಶ್ರಮಿಸಿದರು ಅನ್ನೋ ಪೋಸ್ಟರ್ಗಳನ್ನು ಹಾಕಲಾಗಿದೆ.
2018 ರ ಎಲೆಕ್ಷನ್ನಲ್ಲಿ ಪಕ್ಷೇತರ ಶಾಸಕರು ಮತ್ತು ಎಸ್ಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದ ಬಳಿಕ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು. ಇದೀಗ ನಾಳೆ ಸಭೆ ನಡೆಸಲು ಪೈಲಟ್ ಬಣ ನಿರ್ಧರಿಸಿದೆ. ಈ ಹಿನ್ನೆಲೆ ಇಂದು ಜೈಪುರದಲ್ಲಿ ಪೈಲಟ್ ಬೆಂಬಲಿಗರು ಅವರ ಸಾಧನೆಯ ಪೋಸ್ಟ್ ಹಾಕಿದ್ದಾರೆ.
ಇವು, 2018 ರ ಅಸೆಂಬ್ಲಿ ಚುನಾವಣೆ ವೇಳೆ ಪೈಲಟ್ ಪಕ್ಷಕ್ಕಾಗಿ ಹೋರಾಡಿ ಹೋರಾಟಗಳನ್ನು ಪ್ರದರ್ಶಿಸುತ್ತವೆ. ಕೆಲ ದಿನಗಳ ಹಿಂದೆ ಮಾಜಿ ಬಿಎಸ್ಪಿ ಶಾಸಕರು, ಪೈಲಟ್ ಒಬ್ಬ ದೇಶದ್ರೋಹಿ, ಅವರು ರಾಜ್ಯ ಸರ್ಕಾರವನ್ನು ಉರುಳಿಸಲು ಯತ್ನಿಸಿದವರು ಎಂದು ಆರೋಪಿಸಿದ್ದರು.