ಕರ್ನಾಟಕ

karnataka

ETV Bharat / bharat

ಭೀಕರ ರಸ್ತೆ ಅಪಘಾತ : ಕರ್ನಾಟಕದಿಂದ ಶಬರಿಮಲೆಗೆ ತೆರಳುತ್ತಿದ್ದ 3 ಯಾತ್ರಿಕರ ಸಾವು, 9 ಜನರಿಗೆ ಗಾಯ - ಕೇರಳದಲ್ಲಿ ಭೀಕರ ರಸ್ತೆ ಅಪಘಾತ

ಟಿಟಿ ವಾಹನ ಮತ್ತು ಟ್ರಕ್​​ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಚಾಲಕ ಮತ್ತು ಇತರ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ 9 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಎಲತ್ತೂರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ..

Sabarimala pilgrims' vehicle collides with truck, 3 die
Sabarimala pilgrims' vehicle collides with truck, 3 die

By

Published : Feb 15, 2022, 3:13 PM IST

Updated : Feb 15, 2022, 7:03 PM IST

ಕೋಝಿಕೋಡ್ (ಕೇರಳ):ಶಬರಿಮಲೆ ತೀರ್ಥಯಾತ್ರೆಗೆ ತೆರಳುತ್ತಿದ್ದ ಟಿಟಿ ವಾಹನ ಮತ್ತು ಟ್ರಕ್​​ ನಡುವೆ ಕೋಜಿಕೋಡ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಂದು ಮುಂಜಾನೆ ಈ ಅವಘಡ ಸಂಬಂವಿಸಿದ್ದು, ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೂ ಒಂಬತ್ತು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಘಟನೆಯು ಬೆಳಗ್ಗೆ ಸುಮಾರು 5ಕ್ಕೆ ಸಂಭವಿಸಿದೆ. ಯಾತ್ರಾರ್ಥಿಗಳು ಕರ್ನಾಟಕದಿಂದ ಶಬರಿಮಲೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ಅಪಘಾತ ನಡೆದಾಗ ಯಾತ್ರಾರ್ಥಿಗಳು ನಿದ್ರೆಗೆ ಜಾರಿದ್ದರು. ಬೆಳಗಿನ ಜಾವ ಆಗಿರುವುದರಿಂದ ನಿದ್ದೆ ಮಂಪರಿನಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಟಿಟಿ ವಾಹನ ಮತ್ತು ಟ್ರಕ್​​ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಚಾಲಕ ಮತ್ತು ಇತರ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ 9 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಎಲತ್ತೂರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : ಹಾವೇರಿ : ಜಮೀನಿನಲ್ಲಿದ್ದವರಿಗೆ ಗುದ್ದಿದ ಕಾರು.. ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ

Last Updated : Feb 15, 2022, 7:03 PM IST

ABOUT THE AUTHOR

...view details